ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಶ್ರೀಮತಿ ಕುಶಾಲನಗರ ಎಂಬ ವಿನೂತನ ಕಾರ್ಯಕ್ರಮದಲ್ಲಿ ಶ್ರೀಮತಿ ಕುಶಾಲನಗರ ಎನ್ನುವ ಬಿರುದು ಸ್ಮಿತಾ ಪೂಣಚ್ಚ ಅವರ ಪಾಲಾಯಿತು. ಶ್ರೀಮತಿ ಫೋಟೋಜೆನಿಕ್ ಪ್ರಶಸ್ತಿಯು ಡಾ.ಅರಿಫಿನ್, ಶ್ರೀಮತಿ ಎಲಿಗೆನ್ಸ್ ಆಗಿ ಎನ್.ಸಿ.ಸೀಮಾ ಆಯ್ಕೆಯಾದರು. 
ಜಿಲ್ಲೆ

‘ಶ್ರೀಮತಿ ಕುಶಾಲನಗರ‘ ಆಗಿ ಸ್ಮಿತಾ ಪೂಣಚ್ಚ ಆಯ್ಕೆ

ಎಂ.ರವಿ

ಕುಶಾಲನಗರ: ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಪ್ರಥಮ ಬಾರಿಗೆ ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ‘ಶ್ರೀಮತಿ ಕುಶಾಲನಗರ’ ಎಂಬ ವಿನೂತನ ಕಾರ್ಯಕ್ರಮವನ್ನು ಶುಕ್ರವಾರ ಪಟ್ಟಣದ ಎಪಿಸಿಎಂಎಸ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ‘ಶ್ರೀಮತಿ ಕುಶಾಲನಗರ’ ಎನ್ನುವ ಬಿರುದು ಸ್ಮಿತಾ ಪೂಣಚ್ಚ ಅವರ ಪಾಲಾಯಿತು. ಶ್ರೀಮತಿ ಫೋಟೋಜೆನಿಕ್ ಪ್ರಶಸ್ತಿಯು ಡಾ.ಅರಿಫಿನ್, ಶ್ರೀಮತಿ ಎಲಿಗೆನ್ಸ್ ಆಗಿ ಎನ್.ಸಿ.ಸೀಮಾ ಆಯ್ಕೆಯಾದರು.

23 ಸ್ಪರ್ಧಿಗಳಲ್ಲಿ 3 ಹಂತದ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಲಾಯಿತು. 2ನೇ ಹಂತಕ್ಕೆ 10 ಜನರನ್ನು ಆಯ್ಕೆ ಮಾಡಿಕೊಂಡು ಪ್ರಶ್ನಾವಳಿ ಸುತ್ತಿನಲ್ಲಿ ಸ್ಪರ್ಧೆಯಿಂದ ಮೂವರನ್ನು ಆಯ್ಕೆ ಮಾಡಿಕೊಂಡು ಫೈನಲ್ ಪ್ರವೇಶಿಸಿದರು. ಫೈನಲ್ ಸುತ್ತಿಗೆ ಸೀಮಾ, ಅರಿಫಿನ್ ಮತ್ತು ಸ್ಮಿತಾ ಆಯ್ಕೆಯಾಗಿ ವಿವಿಧ ಕ್ಷೇತ್ರಗಳಲ್ಲಿ ವಿಜೇತರಾದರು.

ಸ್ಪರ್ಧೆಯ ತೀರ್ಪುಗಾರರಾಗಿ ಮಿಸೆಸ್ ಸೌತ್ ಇಂಡಿಯಾ ಕರ್ವೆ ವಿಜೇತೆ ಶ್ರೀಮತಿ ಶ್ವೇತಾ ನಾಯ್ಡು ಮತ್ತು ಬಿಂದಿಯಾ ಉಮೇಶ್ ಪಾಲ್ಗೊಂಡಿದ್ದರು.
ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್, ಉಪಾಧ್ಯಕ್ಷೆ ಚಿತ್ರಾ ರಮೇಶ್, ಕಾರ್ಯದರ್ಶಿ ಜಾಸ್ಮಿನ್ ಪ್ರಕಾಶ್, ಖಜಾಂಚಿ ಸುಪ್ರೀತಾ ರವಿ, ಮಾಜಿ ಅಧ್ಯಕ್ಷೆಯರಾದ ಆರತಿ ಶೆಟ್ಟಿ, ರೂಪಾ ಉಮಾಶಂಕರ್, ದೀಪಾ ಪೂಜಾರಿ, ಸಂಧ್ಯಾ ಪ್ರಮೋದ್, ದಿವ್ಯಾ ಸುಜಯ್, ಅಶ್ವಿನಿ ರೈ, ಸದಸ್ಯರು ಹಾಜರಿದ್ದರು.