ಜಿಲ್ಲೆ

ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದೆ ಈ ಜಮೀನು: ಸರ್ಕಾರದ ಆದೇಶ

ಬೆಂಗಳೂರು: ಬೆಂಗಳೂರಿನ ಜನರು ಮೃತಪಟ್ಟ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ಸರ್ಕಾರಿ ಜಮೀನುಗಳನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿದೆ.

ಈ ಕುರಿತು ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್‌ ಮಾಹಿತಿ ನೀಡಿದ್ದಾರೆ. ಸಂಬಂಧಿತ ತಹಶೀಲ್ದಾರರು ಈ ಕುರಿತು ಸ್ಕೆಚ್‌ ತಯಾರಿಸುವಂತೆ ನಿರ್ದೇಶಿಸಲಾಗಿದೆ.

ಈ ಜಮೀನುಗಳು ಇಂತಿವೆ :

ಬೆಂಗಳೂರು ಉತ್ತರ: ದಾಸನಪುರ ಹೋಬಳಿಯ ಗಿಡ್ಡೆನಹಳ್ಳಿಯ ಸರ್ವೆ ನಂಬರ್‌ 80- ವಿಸ್ತೀರ್ಣ 4 ಎಕರೆ.

ಬೆಂಗಳೂರು ದಕ್ಷಿಣ: ಉತ್ತರಹಳ್ಳಿ ಹೋಬಳಿಯ ಸೋಮನಹಳ್ಳಿ, ಗುಳಿಕಮಲೆ ಹಾಗೂ ತಾವರಕೆರೆ ಹೋಬಳಿಯ ತಿಪ್ಪಗೊಂಡನಹಳ್ಳಿ. (ಸರ್ವೇ ನಂಬರ್‌ಗಳು ಕ್ರಮವಾಗಿ 259, 35, 36 ಹಾಗೂ 4- ವಿಸ್ತೀರ್ಣ ಕ್ರಮವಾಗಿ 1, 4, 4 ಹಾಗೂ 5 ಎಕರೆಗಳು.

ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿಯ ಗೆಡ್ಡನಹಳ್ಳಿಯ ಸರ್ವೇ ನಂಬರ್‌ 23ರ 3 ಎಕರೆ ಜಾಗ, ಜಾಲಾ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಡರ್ವೆ ನಂ. 89ರ 2 ಎಕರೆ ಜಾಗ.

ಯಲಹಂಕ ತಾಲೂಕಿನ ಹೆಸರುಘಟ್ಟದ ಹುತ್ತನಹಳ್ಳಿ ಗ್ರಾಮದ ಸರ್ವೇ ನಂಬರ್‌ 72ರ 2 ಎಕರೆ ಜಾಗ, ಜಾಲ ಹೋಬಳಿಯ ಮಾರೇನಹಳ್ಳಿಯ ಸರ್ವೇ ನಂಬರ್‌ 182ರ 5ಎಕರೆ ಜಾಗ ಹಾಗೂ ಹೆಸರುಘಟ್ಟ ಹೋಬಳಿಯ ಮಾವಳ್ಳಿಪುರದ ಸರ್ವೇ ನಂಬರ್‌ 8ರ 5 ಎಕರೆ ಜಾಗ.