ಶ್ರವಣ್‌ಕುಮಾರ್ ನಾಳ, ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ ಬಹುತೇಕ ರಸ್ತೆ, ಹೆದ್ದಾರಿಯಲ್ಲಿ ಕತ್ತಲು ಕವಿದಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿನ ವಿದ್ಯುತ್ ದಾರಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಬದಲಾಯಿಸುವ ಮಹತ್ತರ ಯೋಜನೆ ಇನ್ನೂ ಗುರಿ ತಲುಪಿಲ್ಲ.
ಸ್ಮಾರ್ಟ್ ಸಿಟಿ ಅನುದಾನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ವಿದ್ಯುತ್ ದಾರಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಬದಲಾಯಿಸುವ ಕಾಮಗಾರಿ 62.63 ಕೋ.ರೂ. ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಹಣಕಾಸಿನ ಮುಗ್ಗಟ್ಟು, ಉಪಕರಣದ ಕೊರತೆ ಸೇರಿದಂತೆ ವಿವಿಧ ಕಾರಣದಿಂದ ಈ ಕೆಲಸ ವೇಗ ಪಡೆಯಲೇ ಇಲ್ಲ. ಪಾಲಿಕೆ ಸಭೆಯಲ್ಲಿ ಆವಗಾವಾಗ ಇದರ ಬಗ್ಗೆ ಸದಸ್ಯರು ಉಲ್ಲೇಖ ಮಾಡುತ್ತಾರಾದರೂ ಎಲ್‌ಇಡಿ ಕೆಲಸ ಗುರಿ ದಾಟಲು ಸಾಧ್ಯವಾಗಿಲ್ಲ.
*ಗುರಿ ತಲುಪಲಪದ ಯೋಜನೆ
ಮಂಗಳೂರು ಪಾಲಿಕೆ ವ್ಯಾಪ್ತಿಯ ಬಹುತೇಕ ಬೀದಿದೀಪಗಳು ಹಳೇಯದಾಗಿದ್ದು, ಬಹುತೇಕ ದೀಪಗಳ ದುರಸ್ತಿಗೂ ಸಾಧ್ಯವಿಲ್ಲ. ಹಲವಡೆ ಬೀದಿ ದೀಪ ಪದೇ ಪದೇ ಹಾಳಾಗುತ್ತಿರುವ ನಿದರ್ಶನವೂ ಇದೆ. ಬೀದಿ ದೀಪದ ನಿರ್ವಹಣಾ ವೆಚ್ಚ, ಮೆಸ್ಕಾಂ ಬಿಲ್‌ಲ್ ಪಾಲಿಕೆಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಕಡಿಮೆ ವೆಚ್ಚದ ನಿರ್ವಹಣೆ ಹಾಗೂ ವಿದ್ಯುತ್ ಉಳಿತಾಯಕ್ಕಾಗಿ ವಿದ್ಯುತ್ ದಾರಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಬದಲಾಯಿಸುವ ಯೋಜನೆಯನ್ನು ಪಾಲಿಕೆಯು ಸ್ಮಾರ್ಟ್ ಸಿಟಿ ಮೂಲಕ ಅನುಷ್ಠಾನಗೊಳಿಸಲು 1 ವರ್ಷದ ಹಿಂದೆ ತೀರ್ಮಾನಿಸಿತ್ತು. 2023ರ ಡಿ.31ರೊಳಗೆ ಇದರ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ಇನ್ನೂ ಶೇ.60 ರಷ್ಟು ಗುರಿ ತಲುಪಲು ಸಾಧ್ಯವಾಗಿಲ್ಲ.
----------------------
ಗುರಿ ತಲುಪಿದ ರ್ೂಟಾಪ್ ಸೋಲಾರ್
ಈ ಮಧ್ಯೆ ಸ್ಮಾರ್ಟ್‌ಸಿಟಿಯಲ್ಲಿ ರ್ೂಟಾಪ್ ಸೋಲಾರ್ ಪರಿಕಲ್ಪನೆಯಡಿಯಲ್ಲಿ ಸರ್ಕಾರಿ ಕಟ್ಟಡಗಳಿಗೆ ಪಿಪಿಪಿ ಮಾದರಿಯಲ್ಲಿ ಸೋಲಾರ್ ಅಳವಡಿಕೆ ಮಾಡಲಾಗುತ್ತಿದೆ. ಪುರಭವನ, ಲಾಲ್‌ಬಾಗ್-ಕದ್ರಿಯ ಪಾಲಿಕೆ ಕಟ್ಟಡ, ಜಿ.ಪಂ ಸಹಿತ ಕೆಲವೆಡೆ ಒಟ್ಟು 1.3 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಸಲಾಗಿದೆ. ಸೋಲಾರ್ ಅಳವಡಿಕೆಯನ್ನು ಟೆಂಡರ್‌ದಾರರು ನಡೆಸುತ್ತಿದ್ದು, ಅದರ ವಿದ್ಯುತ್ ಅನ್ನು ಸಂಬಂಧಿತ ಕಟ್ಟಡದವರು ಬಳಸುತ್ತಾರೆ. ಉಳಿದದ್ದನ್ನು ಮೆಸ್ಕಾಂ ಗ್ರಿಡ್‌ಗೆ ಕಳುಹಿಸಲಾಗುತ್ತದೆ.
-----------------
ಉಪಕರಣದ ಕೊರತೆ
ಕಳೆದ ಒಂದೆರಡು ವರ್ಷಗಳಿಂದ ಎಲ್‌ಇಡಿ ಉಪಕರಣದ ಕೊರತೆ ಎದುರಾಗಿದ್ದು, ಗುತ್ತಿಗೆದಾರರು ಈಬಗ್ಗೆ ಪಾಲಿಕೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಜತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲ್‌ಇಡಿ ದೀಪಗಳ ಬೆಲೆ ವಿಪರೀತ ಏರಿಕೆಯಾಗಿದ್ದು, ಗುತ್ತಿಗೆದಾರರಿಗೆ ಇದರಿಂದ ತೊಂದರೆಯಾಗುತ್ತಿದೆ. ಗುತ್ತಿಗೆದಾರರು ತಾವು ಗುತ್ತಿಗೆ ಪಡೆದ ಮ್ತ್ತೊಕ್ಕಿಂತ ಜಾಸ್ತಿ ಬೆಲೆ ಎಲ್‌ಇಡಿ ದೀಪಗಳಿಗಿರುವುದರಿಂದ ಉತ್ತಮದರ್ಜೆಯ ಎಲ್‌ಇಡಿ ದೀಪಗಳನ್ನು ಹೊರರಾಜ್ಯದಿಂದ ತಂದು ಅಳವಡಿಸಲು ಗುತ್ತಿಗೆದಾಧರು ನಿರ್ಧರಿಸಿದ್ದಾರೆ.
--------------------
----------------------
ಸ್ಮಾರ್ಟ್ ಸಿಟಿ ಅನುದಾನ ಬಳಸಿ ಪಾಲಿಕೆ ವ್ಯಾಪ್ತಿಯಲ್ಲಿನ ವಿದ್ಯುತ್ ದಾರಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಬದಲಾಯಿಸುವ ಯೋಜನೆ ಪ್ರಗತಿಯಲ್ಲಿದೆ. ಉತ್ತಮ ದರ್ಜೆಯ ಉಪಕರಣ ಬಳಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದು, ಪ್ರಸ್ತುತ ಎಲ್‌ಇಡಿ ಉಪಕರಣದ ಕೊರತೆ ಎದುರಾಗಿದೆ. ಮುಂದಿನ 2-3 ತಿಂಗಳೊಳಗೆ ಈ ಯೋಜನೆ ಶೇ.100 ರಷ್ಟು ಗುರಿ ತಲುಪಲಿದೆ.
ಸುದೀರ್ ಶೆಟ್ಟಿ ಕಣ್ಣೂರು, ಮೇಯರ್ ಮಂಗಳೂರು