ಬೆಂಗಳೂರು:ವಾಹನ ದಟ್ಟಣೆ ಮುಕ್ತ ಸಂಚಾರ ಸೇವೆ ಒದಗಿಸುತ್ತಿರುವ ಬೆಂಗಳೂರು ಮಟ್ರೋ ರೈಲು ನಿಗಮ ಮಂಡಳಿ (ಬಿಎಂಆರ್ಸಿಎಲ್) ಕೆಂಪೇಗೌಡ ಬಸ್ ನಿಲ್ದಾಣ ಸೇರಿ ನಗರದ ಕೆಲ ಮೆಟ್ರೋ ನಿಲ್ದಾಣಗಳಲ್ಲಿ "ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್' ಸೇವೆಯನ್ನು ಬುಧವಾರದಿಂದ ಆರಂಭಿಸಿದೆ.
ಈ ಮೂಲಕ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ತಮ್ಮ ಲಗೇಜ್ ಇಟ್ಟು ಬೇರೆ ಕಡೆಗೆ ಹೋಗಬೇಕಿದ್ದ ಸ್ಥಳಗಳಿಗೆ ತೆರಳಿ ವಾಪಸ್ ಬರಬಹುದು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಎಂಆರ್ಸಿಎಲ್, ಸ್ೇ ಕ್ಲಾಕ್ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಮೆಜೆಸ್ಟಿಕ್ ಮತ್ತು ಇತರ ಆಯ್ದ ನಿಲ್ದಾಣಗಳಲ್ಲಿ ಲಭ್ಯವಿದೆ. ಬ್ಯಾಗ್ನ್ನು 6 ಗಂಟೆಗಳಿಗೆ (ಮಧ್ಯಮ ಗಾತ್ರ) ಕೇವಲ 70 ರೂ ಮತ್ತು ದೊಡ್ಡ ಗಾತ್ರದ ಲಗೇಜ್ಗೆ 100 ರೂ.ನಿಗದಪಡಿಸಲಾಗಿದೆ ಎಂದು "ಎಕ್ಸ್'ನಲ್ಲಿ ಟ್ವೀಟ್ ಮಾಡಿದೆ. ಈ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ತಮ್ಮ ಲಗೇಜ್ನ್ನು ಸುರತವಾಗಿ ಡಿಜಿಟಲ್ ಲಾಕರ್ನಲ್ಲಿ ಇಟ್ಟು ಸುತ್ತಾಡಿಕೊಂಡು ಬರಬಹುದು. ಮಧ್ಯಮ ಮತ್ತು ದೊಡ್ಡ ಗಾತ್ರಕ್ಕೆ ವಿಭಿನ್ನ ದರ ನಿಗದಿ ಮಾಡಲಾಗಿದೆ. ಒಂದು ಲಗೇಜ್ಗೆ ಪ್ರತಿ ಗಂಟೆಗೆ 12 ರೂ.ನಿಂದ 15 ರೂ. ಪಾವತಿ ಮಾಡಬೇಕು.
ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಎಲ್ಲ ಲಗೇಜ್ ಬ್ಯಾಗ್ಗಳನ್ನು ಪರೀಕ್ಷಿಸಿ ಒಳಗೆ ಬಿಡಲಾಗುತ್ತದೆ. ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಒಂದು ಹಂತದಲ್ಲಿ ಮೆಟಲ್ ಡಿಟೆಕ್ಟರ್, ಸ್ಕ್ಯಾನರ್ ಮೂಲಕ ಬ್ಯಾಗ್ ಚೇಕಿಂಗ್ ಮಾಡಲಾಗುತ್ತದೆ. ಹರಿತವಾದ ಆಯುಧ, ಸ್ಫೋಟಕ ವಸ್ತು ಹಾಗೂ ಬೆಂಕಿ ಹತ್ತಿಕೊಳ್ಳುವ ಎಣ್ಣೆಗಳು ಹೊಂದಿರುವ ಲಗೇಜು ರ್ನಿಬಂಧಿಸಲಾಗಿದೆ. ಒಂದು ಬ್ಯಾಗ್ನ ತೂಕ 15 ಕೆಜಿಗಿಂತ ಹೆಚ್ಚಾಗಿದ್ದರೆ ಅದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆ. 15 ಕೆಜಿಗಿಂತ ಅಧಿಕ ಹಾಗೂ ಮಧ್ಯಮ ಗಾತ್ರದ ಬ್ಯಾಗ್ಗಳನ್ನು ಮೆಟ್ರೋ ಕೌಂಟರ್ನಲ್ಲಿಟ್ಟು ತಮ್ಮ ತುರ್ತು ಕೆಲಸ ಮುಗಿಸಿಕೊಂಡು ವಾಪಸ್ ತೆಗೆದುಕೊಂಡು ಹೋಗಬಹುದು.
ಯಾರ್ಯಾರಿಗೆ ಅನುಕೂಲ?
* ಊರಿನಿಂದ ಬಂದವರು ಮನೆಗೆ ಹೋಗಲು ಸಮಯವಿಲ್ಲದೆ ಕಚೇರಿ ಕೆಲಸಕ್ಕೆ ಹೋಗುವವರು ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ಲಗೇಜು ಇಡಬಹುದು
* ಬೆಂಗಳೂರಿನ ಯಾವುದಾದರೂ ಒಂದೆರೆಡು ಗಂಟೆ ತುರ್ತು ಕೆಲಸ ಇರುವವರಿಗೆ
* ಕಚೇರಿಗಳಿಂದ ನೇರವಾಗಿ ಶಾಪಿಂಗ್ ಹೋಗುವವರಿಗೆ
* ಸ್ನೇಹಿತರ ಜತೆ ಸಿನಿಮಾ ಅಥವಾ ಪಾರ್ಟಿಗೆ ಹೋಗಬೇಕಾದಲ್ಲಿ ಕಚೇರಿಯ ಬ್ಯಾಗ್ ಇಡಬಹುದು.
* ಮಹಿಳೆಯರು, ವೃದ್ಧರು, ಗರ್ಭಿಣಿಯರು ತಮ್ಮ ಲಗೇಜು ಹೊತ್ತುಕೊಂಡು ಹೋಗಲಾಗದ ವೇಳೆ ಲಾಕರ್ ಸೌಲಭ್ಯ ಪಡೆದುಕೊಳ್ಳಬಹುದು.