ಬೆಳಗಾವಿ: ಗ್ರಾಮೀಣ ೇತ್ರದಲ್ಲಿ ಶಿಣ ಹಾಗೂ ಆರೋಗ್ಯ ೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪಾಲಕರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಕುವೆಂಪು ನಗರದಲ್ಲಿ 2024&25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಗ್ರಾಮೀಣ ೇತ್ರದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿ, ಒಬ್ಬ ಗುಮಾಸ್ತ ಅಥವಾ ರಾಷ್ಟ್ರಪತಿ ತಮ್ಮ ಮಕ್ಕಳಿಗೆ ಉತ್ತಮ ಶಿಣ ಸಿಗಲಿ ಎಂದು ಕನಸು ಕಾಣುತ್ತಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಅಮ್ಮ&ಅಪ್ಪನ ಕನಸು ನನಸು ಮಾಡಿ ಹೆಸರು ಮಾಡಬೇಕು ಎಂದರು.
ೇತ್ರದ ಜನಪ್ರತಿನಿಧಿಯಾಗಿ ಶೈಣಿಕ ಮೂಲಸೌಲಭ್ಯ ಕಲ್ಪಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಸ್ಮಾರ್ಟ್ಕ್ಲಾಸ್ ಸೌಲಭ್ಯ ನನ್ನ ಕನಸಾಗಿದ್ದು, ಶ್ರೀದಲ್ಲೇ ಒದಗಿಸಲಾಗುವುದು. ಶೇ.90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಷಿ$್ಮತಾಯಿ ಫೌಂಡೇಶನ್ ವತಿಯಿಂದ ನಗದು ಪುರಸ್ಕಾರ ನೀಡಲಾಗುವುದು ಎಂದು ೂಷಿಸಿದರು.
ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಗ್ರಾಮೀಣ ೇತ್ರದಲ್ಲಿ ಶಿಣಕ್ಕೆ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಲೂಕುಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಿ ಬೆಳೆಗುಂದಿ ಭಾಗದಲ್ಲಿ ಆರು ಎಕರೆ ಭೂಮಿಯನ್ನು ಈಗಾಗಲೇ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀದಲ್ಲೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದರು.
ಶಾಲಾ ಶಿಣ ಇಲಾಖೆಯ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಯುವರಾಜ ಕದಂ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ೇತ್ರ ಶಿಣಾಧಿಕಾರಿ ದಾಸಪ್ಪನವರ ಇತರರಿದ್ದರು.