ವಿಜಯಪುರ: ನಗರದ ಗಾಂಧಿವೃತ್ತ ಬಳಿಯ ಸರ್ಕಾರಿ ಕೆಪಿಎಸ್, ಕೆಜಿಎಂಪಿಎಸ್ ನಂ.1 ಶಾಲೆಗೆ ಮುಂಬಯಿ ಮೂಲದ ಶೇಟ್ ತಾಪಿದಾಸ, ತುಳಸಿದಾಸ ವಜ್ರದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಒಂದು ಲಕ್ಕೂ ಅಧಿಕ ಮೌಲ್ಯದ ಸ್ಮಾರ್ಟ್ ಬೋರ್ಡ್ ಹಾಗೂ ಪ್ರೋಜೆಕ್ಟರ್ ದೇಣಿಗೆ ನೀಡಲಾಯಿತು.
ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಸರ ದಿನಾಚರಣೆ ನಿಮಿತ್ತ ಟ್ರಸ್ಟ್ ಕೋ&ಆರ್ಡಿನೇಟರ್ ವಿಶ್ವನಾಥ ಸಿಂದಗಿ ಸ್ಮಾಟ್ಬೋರ್ಡ್ ಸೇರಿ ಮುಂತಾದ ಸಲಕರಣೆಗಳನ್ನು ಹಸ್ತಾಂತರಿಸಿ, ಸ್ಮಾರ್ಟ್ ಬೋರ್ಡ್ ಕುರಿತು ಮಕ್ಕಳಿಗೆ ತಿಳಿಸುವ ಜತೆಗೆ ಸಲಹೆ ನೀಡಿದರು.
ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.
ಚಾರಿಟೆಬಲ್ ಟ್ರಸ್ಟ್ನ ಕೋ&ಆರ್ಡಿನೇಟರ್ ವಿಶ್ವನಾಥ ಸಿಂದಗಿ ದಂಪತಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಗುರುಮಾತೆ ಎಸ್.ಎಂ. ತೋಟದ, ಎಸ್.ಎಸ್. ಬಬಲೇಶ್ವರ, ಎಸ್.ಎಂ. ಮುಳವಾಡ, ಎಸ್.ಎನ್. ಪಾಟೀಲ ಮತ್ತಿತರರಿದ್ದರು.