ಜಿಲ್ಲೆ

ಗದಗ ಸುದ್ದಿಗಳು

Gadag - Shivanand Hiremath

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆ. 31 ರಂದು ಸಂಜೆ 4.30ಕ್ಕೆ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ್​ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ನುಲಿಯ ಚಂದಯ್ಯನವರ ಜಯಂತಿ: ನುಲಿಯ ಚಂದಯ್ಯನವರ ಜಯಂತಿಯನ್ನು ಆ.31ರಂದು ಬೆಳಗ್ಗೆ 11ಕ್ಕೆ ಜಿಲ್ಲಾಡಳಿತ ಭವನದದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ ಶಾಂತಕುಮಾರ್​ ಭಜಂತ್ರಿ ಅವರು ನುಲಿಯ ಚಂದಯ್ಯನವರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಗೃಹಲಕ್ಷ್ಮೀ ಯೋಜನೆಗೆ ಚಾಲನೆ
ಗದಗ: ನಗರದ ಭಾರತ ರತ್ನ ಭೀಮಸೇನ ಜೋಶಿ ರಂಗಮಂದಿರದಲ್ಲಿ ಆ.30 ರಂದು ಮಧ್ಯಾಹ್ನ 12ಕ್ಕೆ ಗೃಹಲಕ್ಷಿ$್ಮ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಆಹ್ವಾನ: ಜಿಲ್ಲೆಯ ನರಗುಂದ ಸರ್ಕಾರಿ ಇಂಜನೀಯರಿಂಗ್​ ಕಾಲೇಜಿನಲ್ಲಿ ಖಾಲಿ ಇರುವ ಗಣಿತಶಾಸ್ತ್ರ, ಗಣಕಯಂತ್ರ ವಿಜ್ಞಾನ ಇಂಜನೀಯರಿಂಗ್​, ಎಲೆಕ್ಟ್ರಾನಿಕ್ಸ್​ , ಅಟಿರ್ಫಿಷಿಯಲ್​ ಇಂಟಲಿಜೆನ್ಸ್​ ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ಬೋಧಿಸಲು ಅರೆಕಾಲಿಕ ಉಪನ್ಯಾಸಕರ ನೇಮಕಾತಿಗಾಗಿ ಅಜಿರ್ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಆಹ್ವಾನ: ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಣಿಕ ಸಾಲ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಯೋಜನೆಯಡಿ ಸಾಲ ಸೌಲಭ್ಯವನ್ನು ಪಡೆಯಲು ಆನ್​ಲೈನ್​ ಮೂಲಕ ಸೆ.18ರ ಒಳಗಾಗಿ ಅಜಿರ್ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾಷಿರ್ಕ ಸಭೆ:
ನಿವೃತ್ತ ಸರ್ಕಾರಿ ನೌಕರರ ಕೋ&ಆಪ್​ ಕ್ರೆಡಿಟ್​ ಸೊಸೈಟಿ 9ನೇ ವಾಷಿರ್ಕ ಸರ್ವ ಸಾಧಾರಣ ಸಭೆಯನ್ನು ಆ.31 ರಂದು ಮಧ್ಯಾಹ್ನ 1 ಗಂಟೆಗೆ ಬಸವೇಶ್ವರ ನಗರದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿಗಳ ಪರಿಶೀಲನೆಗೆ ದಿನಾಂಕ ನಿಗದಿ: 2022-23ನೇ ಸಾಲಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಸಂಬಂಧಸಿದಂತೆ ಬಯೋಮೆಟ್ರಿಕ್ ಆಥಂಟಿಕೇಷನ್ ಹಾಗೂ ಅರ್ಜಿಗಳನ್ನು ಪರಿಶೀಲನೆ ಮಾಡಲು ಈ ಕೆಳಕಂಡಂತೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳ ಬಯೋಮೆಟ್ರಿಕ್ ಮಾಡಿಸಲು ಅಗಸ್ಟ 31 ಕೊನೆಯ ದಿನವಾಗಿದೆ. ಶಾಲೆ/ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಗಳ ಅರ್ಜಿ ಪರಿಶೀಲನೆಗೆ ಸೆಪ್ಟೆಂಬರ್ 6 ಕೊನೆಯ ದಿನವಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲು ಬಯೋಮೆಟ್ರಿಕ್ ಆಥಂಟಿಕೇಷನ್    ಕಡ್ಡಾಯವಾಗಿರುತ್ತದೆ. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲಾ/ಕಾಲೇಜುಗಳ ಮುಖ್ಯಸ್ಥರ ಹಾಗೂ ಶಾಲಾ/ಕಾಲೇಜಿನಲ್ಲಿ ನೇಮಕವಾಗಿರುವ ಇನ್‍ಸ್ಟಿಟ್ಯೂಟ್ ನೋಡಲ್ ಅಧಿಕಾರಿಗಳವರ ಬಯೋಮೆಟ್ರಿಕ್ ಆಥಂಟಿಕೇಷನ್ ಮತ್ತು ಎಲ್ಲಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಆಥಂಟಿಕೇಷನ್ ಹಾಗೂ ಅರ್ಜಿಗಳ ಪರಿಶೀಲನೆ ಮಾಡಿಸಲು ಮೇಲ್ಕಂಡ ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕೂ ಮಾಹಿತಿ ಕೇಂದ್ರಗಳ ದತ್ತಾಂಶ ನಿರ್ವಾಹಕರ ಮೂಲಕ ಕೈಗೊಳ್ಳಲು ತಿಳಿಸಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಯೋ ಮೆಟ್ರಿಕ್ ಆಥಂಟಿಕೆಷನ್ ಬಾಕಿ ಉಳಿದಲ್ಲಿ ಅಂತಹ ಶಾಲಾ/ಕಾಲೇಜುಗಳ ಮುಖ್ಯಸ್ಥರು ಮತ್ತು ನೋಡಲ್ ಅಧಿಕಾರಿಯವರು ಇದಕ್ಕೆ ನೇರ ಹೋಣೆಗಾರರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಕೇಂದ್ರ ಗದಗ-9901132191, ಶಿರಹಟ್ಟಿ-9591705863, ಮುಂಡರಗಿ-9916689778, ನರಗುಂದ-9901501170, ರೋಣ-9964490088 ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.