ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಸುರೇಶ ಹಾರಿವಾಳ, ಬಸವರಾಜ ಕೋಟಿ, ಭರತ ಅಗರವಾಲ ಇತರರಿದ್ದರು. 
ಜಿಲ್ಲೆ

ಎಸ್.ಎಂ. ಕೃಷ್ಣ ದೂರದೃಷ್ಟಿಯ ನಾಯಕ

ಬಸವನಬಾಗೇವಾಡಿ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ, ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ನಡೆದ ಮಾಜಿ ಸಿ.ಎಂ. ಎಸ್.ಎಂ ಕೃಷ್ಣ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷ್ಣ ಅವರು ದೇಶ ಕಂಡ ಅತ್ಯಂತ ಪ್ರಭುದ್ಧ ರಾಜಕಾರಣಿ, ರಾಜ್ಯ ಮತ್ತು ದೇಶಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಕೃಷಿ ಹಾಗೂ ಬೆಂಗಳೂರು ನಗರದಲ್ಲಿ ಐಟಿ ಬಿಟಿ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ ನಾಯಕರು. ಮುಂದಿನ 50 ವರ್ಷದ ದೂರದೃಷ್ಟಿಯೊಂದಿಗೆ ತಮ್ಮ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಸುರೇಶ ಹಾರಿವಾಳ, ಬಸವರಾಜ ಕೋಟಿ, ಭರತ ಅಗರವಾಲ, ಸುರೇಶಗೌಡ ಪಾಟೀಲ, ಶೇಖನಗೌಡ ಪಾಟೀಲ, ಬಸಣ್ಣ ದೇಸಾಯಿ, ಬಸವರಾಜ ಗೊಳಸಂಗಿ, ಸಂಕನಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಬಸವರಾಜ ರಾಯಗೊಂಡ, ಲಕ್ಕಪ್ಪ ಚಿರಚನಕಲ್ಲ, ಸಂಗಯ್ಯ ಕಾಳಹಸ್ತೇಶ್ವರಮಠ, ರಂಜಾನ್ ಹೆಬ್ಬಾಳ, ತಮ್ಮಣ್ಣ ಕಾನಾಗಡ್ಡಿ, ಅಜೀಜ ಬಾಗವಾನ, ಸಂಗನಬಸು ಪುಜಾರಿ, ಭದ್ರು ಮಣ್ಣೂರ, ಅನಿಲ ಪವಾರ, ಬಸವರಾಜ ಚೌರಿ, ಶಂಕರಗೌಡ ಪಾಟೀಲ, ಬಸನಗೌಡ ಪಾಟೀಲ, ರಮೇಶ ಹಡಪದ, ಪರುಶರಾಮ ಜಮಖಂಡಿ, ಭೀಮು ನಿಡಗುಂದಿ ಇತರರಿದ್ದರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಬೆಂಗಳೂರಿಗೆ ವಿಶ್ವಮಾನ್ಯತೆ ತಂದು ಕೊಟ್ಟ ದಕ್ಷ ನಾಯಕ ಎಂದು ಸಚಿವ ಶಿವಾನಂದ ಪಾಟೀಲ ಅವರು ಬಣ್ಣಿಸಿದ್ದಾರೆ.