ಶ್ರೀಕಾಂತ ಅಕ್ಕಿ ಬಳ್ಳಾರಿ: ಕಳೆದ 10ವರ್ಷದಿಂದ ತಮಗೆ ಬರುವ ವೇತನದಲ್ಲಿಯೇ ಉಚಿತವಾಗಿ ಮಕ್ಕಳಿಗೆ ಶೈಕ್ಷಣಿಕ ಅವಶ್ಯಕ ಸಾಮಗ್ರಿ ನೀಡುತ್ತಿರುವ ಶಿಕ್ಷಕರೋರ್ವರು ಇದೀಗ ಅನಾಥಶ್ರಮ ಆರಂಭಿಸುವುದಕ್ಕೆ ಹಣದ ಕೊರತೆಯಾಗಿದ್ದಕ್ಕೆ ಪತ್ನಿಯ ಮಾಂಗಲ್ಯ ಒತ್ತೆಯಿಟ್ಟಿದ್ದಾರೆ. ಜಾಗ ಖರೀದಿಗೆ ಹಣವಿಲ್ಲದೆ ಇದ್ದಾಗ, ಪತ್ನಿಯ ಮನವೊಲಿಸಿ ಹಣ ತೆಗೆದುಕೊಂಡು ಅನಾಥ ಶ್ರಮಕ್ಕೆ ವಿನಿಯೋಗಿಸಿದ್ದಾರೆ.
ಹುಟ್ಟು ಮತ್ತು ಸಾವು ಆಕಸ್ಮಿಕ.ಆದರೆ, ಇವೆರಡರ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ಕೊಡುತ್ತೇವೆ ಎನ್ನುವುದು ಮುಖ್ಯ.ಈ ದಿಶೆಯಲ್ಲಿ ಪ್ರಸಕ್ತ ಸಾಲಿನಿಂದ ಅನಾಥ ಶ್ರಮ ಆರಂಭಿಸುತ್ತಿದ್ದೇವೆ.ಇದರಿಂದ ನಾಲ್ಕಾರು ಮಕ್ಕಳಿಗೆ ಒಳ್ಳೆಯದಾದರೇ ಸಾಕು. |ಬಿ.ಎಚ್.ಎಂ.ವಿರುಪಾಕ್ಷಯ್ಯ, ಶಿಕ್ಷಕ, ಅಧ್ಯಕ್ಷರು, ರಾಜ್ಯ ಸ್ಲಂ ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತನಾ ಸಂಸ್ಥೆ, ಬಳ್ಳಾರಿ
ನಗರದ ಕೌಲ್‌ಬಜಾರ್‌ನಲ್ಲಿರುವ ಬಸಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಬಿ.ಎಚ್.ಎಂ.ವಿರುಪಾಕ್ಷಯ್ಯ ಅವರು, ಅನಾಥ ಶ್ರಮಕ್ಕೆ ಈಗಾಗಲೇ ಪತ್ನಿಯ ಮಾಂಗಲ್ಯದಿಂದ ಬಂದ ಹಣ ಸೇರಿ 13 ಲಕ್ಷ ರೂ.ವ್ಯಯಿಸಿದ್ದು, ಇನ್ನೂ 3 ಲಕ್ಷ ರೂ.ಹಾಕಿದರೇ ಅನಾಥ ಶ್ರಮ ಸಂಪೂರ್ಣ ಬಳಕಗೆ ದೊರೆಯಲಿದೆ. ಈ ಮೂಲಕ ತಂದೆ, ತಾಯಿ ಇಲ್ಲದ, ಎಚ್‌ಐವಿ ಮತ್ತು ಕ್ಯಾನ್ಸರ್‌ಪೀಡಿತ ತಂದೆ-ತಾಯಿಂದಿರ ಮಕ್ಕಳ ಬಾಳಿಗೆ ಈ ಶಿಕ್ಷಕ ಆಶಾ ಕಿರಣವಾಗಿದ್ದಾರೆ.ಇಂಥ ಮಕ್ಕಳಿಗಾಗಿಯೇ ನಗರದ ಕೌಲ್‌ಬಜಾರ್‌ನ ಜಾಗೃತಿ ನಗರದಲ್ಲಿ ‘ಸಂಸ್ಕಾರ’ ಎಂಬ ಹೆಸರಿನಡಿ ಅನಾಥ ಶ್ರಮ ತೆಗೆದಿದ್ದು, ಪ್ರಸಕ್ತ ಸಾಲಿನಿಂದ ಕಾರ್ಯಾರಂಭ ಮಾಡುತ್ತಿದೆ.ಈಗಾಗಲೇ 12ಮಕ್ಕಳು ನೋಂದಣೆಯಾಗಿದ್ದು, ಇನ್ನೂ 18ಅನಾಥ ಮಕ್ಕಳಿಗೆ ಸೇರ್ಪಡೆಯಾಗಲು ಅವಕಾಶವಿದೆ. ಬಡ ಮಕ್ಕಳಿಗೆ ಪುಸ್ತಕ, ಬಟ್ಟೆ, ಶಿಕ್ಷಣದ ವೆಚ್ಚ ಭರಿಸುತ್ತಿರುವ ಇವರು, ಇದೀಗ ಮತ್ತೊಂದು ಹೆಜ್ಜೆ ಹೋಗಿ ಅನಾಥ ಶ್ರಮ ತೆರೆಯುತ್ತಿದ್ದಾರೆ.ಈಗಾಗಲೇ ಕಟ್ಟಡ ಗುರುತಿಸಿ, ಸಕಲ ಸಿದ್ಧತೆ ಮಾಡಿದ್ದಾರೆ.ಬಡ ಮಕ್ಕಳನ್ನು ಹುಡುಕುವ ಕಾಯಕದಲ್ಲಿ ನಿರತವಾಗಿದ್ದು, ಕೋವಿಡ ಆತಂಕ ಕೊಂಚ್ ತಗ್ಗಿದ ತಕ್ಷಣ ಅನಾಥ ಶ್ರಮ ಆರಂಭವಾಗಲಿದೆ ಎನ್ನುತ್ತಾರೆ ಶಿಕ್ಷಕ ಡಾ.ಎಚ್.ಎಂ.ವಿರುಪಾಕ್ಷಯ್ಯ.
ಇದನ್ನೂ ಓದಿ: ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!

ಆಶ್ರಮದ ಕನಸು ಹುಟ್ಟಿದ್ದು ಹೇಗೆ..?
ದೈಹಿಕ ಶಿಕ್ಷಕರಾಗಿರುವ ಬಿ.ಎಚ್.ಎಂ.ವಿರುಪಾಕ್ಷಯ್ಯ ಅವರು, ದಿನನಿತ್ಯ ಪ್ರಾರ್ಥನೆ ಮುಗಿದ ನಂತರ ತಡವಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡುತ್ತಿದ್ದರು.ಈ ವೇಳೆ ತಡವಾಗಿ ಬಂದ ಇಬ್ಬರು ವಿದ್ಯಾರ್ಥಿಗಳನ್ನು ಗಮನಿಸಿದ್ದಾರೆ. ಅವರು, ತಡವಾಗಿ ಬರುತ್ತಿರುವುದೇಕೆ..? ಎಂದು ಅವರ ಮನೆಗೆ ತೆರಳಿ ನೋಡಿದಾಗ ಇವರಿಗೆ ಅಚ್ಚರಿಯಾಗಿದೆ. ಓರ್ವ ಬಾಲಕಿಗೆ ತಾಯಿಯಿಲ್ಲ, ತಂದೆಯಿದ್ದರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅಜ್ಜಿಗೆ ಕಣ್ಣು ಕಾಣಿಸುವುದಿಲ್ಲ, ಇನ್ನೊಂದು ಬಾಲಕಿಯ ಕಥೆಯೂ ಇದಕ್ಕಿಂತ ಭಿನ್ನವಾಗಿತ್ತು.ಈ ಇಬ್ಬರು ಬಾಲಕಿಯರು ನಾನಾ ಕಡೆ ಭಿಕ್ಷೆ ಬೇಡಿ, ಪೋಷಕರಿಗೆ ಊಟ ಹಾಕಿದ ಬಳಿಕ ಶಾಲೆಗೆ ಬರಬೇಕಾಗಿದ್ದರಿಂದ ವಿಳಂಭವಾಗುತಿತ್ತು.ಇದರಿಂದ ಮನನೊಂದು, ಅಂದಿನಿಂದ ಬಡ, ನಿರ್ಗತಿಕ ಮಕ್ಕಳಿಗೆ ಆಸರೆಯಾಗುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ಸ್ಲಂ ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತನಾ ಸಂಸ್ಥೆಯಡಿ ಒಂದನೆ ತರಗತಿಯಿಂದ ಪದವಿವರೆಗೆ ಓದುವ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕವಾಗಿ ಬೇಕಾಗುವಂತ ಅವಶ್ಯಕ ವಸ್ತುಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ಪ್ರಸಕ್ತ ಸಾಲಿನಿಂದ ನೂತನವಾಗಿ ಅನಾಥ ಶ್ರಮ ಪ್ರಾರಂಭಿಸಿ, ಅಲ್ಲಿಯೇ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಿ, ಶಾಲಾ-ಕಾಲೇಜುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.