JANARDANA HALLIBENCHI 
ಜಿಲ್ಲೆ

ಮೇ 31 ರಂದು ಸ್ಲಂ ನಿವಾಸಿಗಳ ಸಮಾವೇಶ

Raichur - Reporter - Rachhai Swamy

 ರಾಯಚೂರು ಸ್ಲಂಗಳ ಜನರಿಗೆ ಸಂವಿಧಾನ ಆಶಯ ಜಾರಿಗೊಳಿಸಲು ಆಗ್ರಹಿಸಿ ಸ್ಲಂ ಜನರ ಸಮಾವೇಶವನ್ನು ಮೇ 31 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸ್ಲಂ ಜನಾಂದೋನ ಕೇಂದ್ರದ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾತನಾಡಿ, ರಾಜ್ಯದಲ್ಲಿ ಶೇ.40ಜನರು ಸ್ಲಂಗಳಲ್ಲಿ ವಾಸ ಮಾಡುತ್ತಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅಭಿವೃದ್ದಿಪಾಲುದೊರೆಯುತ್ತಿಲ್ಲ. ಎಲ್ಲಾ ಜಾತಿ, ಧರ್ಮದವರು ಸ್ಲಂಗಳಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಸ್ಲಂಗಳ ಅಭಿವೃದ್ದಿ ಜಾರಿಗೊಳಿಸಿರುವ ಕೊಳಗೇರಿ ಅಭಿವೃದ್ದಿ ಕಾಯ್ದೆ ಜಾರಿಗೊಳಿಸಲು ಸರ್ಕಾರಗಳು ಮುಂದಾಗುತ್ತಿಲ್ಲ.

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡದೇ ಹೋಗಿವೆ. ಸ್ಲಂಗಳಲ್ಲಿ ವಾಸ ಮಾಡುವ ಜನರಿಗೆ ನಿವೇಶನ, ವಸತಿ ಹಕ್ಕು ನೀಡಲು ಮುಂದಾಗಬೇಕೆಂದು ನಗರದಲ್ಲಿ ವಾಜಪೇಯಿ ವಸತಿ ಯೋಜನೆಡಿ 2017 ರಲ್ಲಿ ಹಕ್ಕುಪತ್ರ ನೀಡಲಾಗಿದೆ. ಇಂದಿಗೂ ನಿವೇಶನ ಕೊಟ್ಟಿಲ್ಲ. ವಿಶೇಷ ವರ್ಗದ ಜನರಿಗೆ ನಿವೇಶನ ನೀಡುವಂತೆ ಸರ್ಕಾರ ಆದೇಶ ನೀಡಿದ್ದರೂ ಮಹಾನಗರ ಪಾಲಿಕೆ ಪಾಲಿಸುತ್ತಿಲ್ಲ.

ಈ ಸ್ಲಂ ಹಬ್ಬದಲ್ಲಿ ವಿವಿಧ ಸ್ಲಂ ನಿವಾಸಿಗಳ 10 ಕಲಾತಂಡಗಳು ಭಾಗಿಯಾಗಲಿವೆ. ನಗರದ ಶಾಸಕರು, ಜಿಲ್ಲಾಧಿಕಾರಿಗಳು, ಪಾಲಿಕೆ ಅಧ್ಯಕ್ಷರು ಸೇರಿದಂತೆ ಅನೇಕರು ಭಾಗವಹಿಸಲಿದ್ದು ಸ್ಲಂ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ.ಪಿ.ಅನಿಲ್ ಕುಮಾರ, ಶಹನಾಜ್, ಶರಣಬಸವ, ನೂರಜಾನ್, ಬಸವರಾಜ ಹೊಸೂರು, ಮಾಧವರೆಡ್ಡಿ, ನಾಗರಾಜ, ಮಹೇಶ ಇದ್ದರು.