ಅರ್ಬಿ ಕಾಲುವೆಯ ಮೇಲಿನಿಂದ ಗುಡ್ಡದ ಮಣ್ಣು ಕುಸಿದು ಸ್ಥಳೀಯ ಕೃಷಿಗದ್ದೆಗಳು ಮತ್ತು ಅಡಕೆ ತೋಟಕ್ಕೆ ಕೆಸರು ನೀರು ನುಗ್ಗಿರುವುದು. 
ಜಿಲ್ಲೆ

ಕೃಷಿ ಭೂಮಿಗೆ ಕೆಸರು ನೀರು

ಸೌಮ್ಯ ಆರ್

ಗುರುಪುರ: ಪಡುಪೆರಾರ ಗ್ರಾಪಂ ವ್ಯಾಪ್ತಿಯ ಅರ್ಬಿ ಕಾಲುವೆ ಮೇಲಿನಿಂದ ಗುಡ್ಡದ ಮಣ್ಣು ಕುಸಿದು ಕಾಲುವೆ ನೀರಿಗೆ ತಡೆಯಾಗಿ ಸ್ಥಳೀಯ ಕೃಷಿಗದ್ದೆಗಳು ಮತ್ತು ಅಡಕೆ ತೋಟಕ್ಕೆ ಭಾರಿ ಪ್ರಮಾಣದ ಕೆಸರು ನೀರು ನುಗ್ಗಿದೆ.

ಶುಕ್ರವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅರ್ಬಿ ಕಾಲುವೆ ಮೇಲ್ಗಡೆ ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡದ ಮಣ್ಣು ಕಾಲುವೆಗೆ ಬಿದ್ದಿದೆ. ಇದರಿಂದ ಕಾಲುವೆ ನೀರಿನ ಹರಿವಿಗೆ ತಡೆಯುಂಟಾಗಿ ಹತ್ತಿರದ ಕಬ್ಬೆತ್ತಿಗುತ್ತಿನ ಕಂಬಳದ ಗದ್ದೆ ಸಹಿತ ಹಲವು ಕೃಷಿ ಗದ್ದೆಗಳು ಹಾಗೂ ಅಡಕೆ ತೋಟಕ್ಕೆ ನೀರು ನುಗ್ಗಿದೆ.

ಘಟನಾ ಸ್ಥಳಕ್ಕೆ ಪಡುಪೆರಾರ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಪಿಡಿಒ ಉಗ್ಗಪ್ಪ ಮೂಲ್ಯ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುಡ್ಡದ ನೀರು ನೇರವಾಗಿ ಅರ್ಬಿ ಕಾಲುವೆಗೆ ಹರಿಯದಂತೆ ಗುಡ್ಡದ ಬದಿಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.