ಮುದ್ದೇಬಿಹಾಳ: ತಂದೆ, ತಾಯಿ ಸ್ಮ ರಣಾರ್ಥ ಹಬ್ಬ ಹರಿದಿನಗಳಂದು ದಾಸೋಹ ನಡೆಸುವುದು ಪುಣ್ಯದ ಕಾರ್ಯ. ಸಮಾಜ ಸೇವಕ ಅಯ್ಯೂಬ್ ಮನಿಯಾರ 28 ವರ್ಷಗಳಿಂದ ರಂಜಾನ್ ಹಬ್ಬದಂದು ಇಂಥ ಸೇವೆ ಸಲ್ಲಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಕುಂಟೋಜಿ ಭಾವೈಕ್ಯ ಮಠದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಹುಡ್ಕೋದಲ್ಲಿ ಸಮಾಜ ಸೇವಕ ಅಯ್ಯೂಬ್ ಮನಿಯಾರ ಅವರು ಮನಿಯಾರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಡ ಮುಸ್ಲಿಮರಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಇಳಕಲ್ಲದ ಚಿಂತಕ ಲಾಲಹುಸೇನ ಕಂದಗಲ್ ಮಾತನಾಡಿ, ಕುರಾನ್ ನಮ್ಮೊಳಗಿನ ಸ್ವಾರ್ಥ ನಿವಾರಣೆ ಪಾಠ ಕಲಿಸಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯೆ ಹೆಚ್ಚಾದಂತೆ ಅಹಂಕಾರವೂ ಹೆಚ್ಚಾಗತೊಡಗಿದೆ. ನಿಜವಾದ ವಿದ್ಯಾವಂತ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಅಯ್ಯೂಬ್ ಮನಿಯಾರ ಮಾತನಾಡಿ, ತಂದೆ, ತಾಯಿ ಸ್ಮರಣೆಯಲ್ಲಿ ದಾನ ಮಾಡುವುದು ತೃಪ್ತಿ ನೀಡುತ್ತದೆ. ಅನ್ಯಾಯದ ಮಾರ್ಗದಲ್ಲಿ ತೃಪ್ತಿ ಇರುವುದಿಲ್ಲ. ಆ ರೀತಿ ಗಳಿಸಿದ ಹಣ ದಾನಕ್ಕೆ ಯೋಗ್ಯವಲ್ಲ. ನಮ್ಮ ಸತ್ಕರ್ಮಗಳು ಸದ್ಗತಿಯ ಮಾರ್ಗ ತೋರಿಸುತ್ತವೆ ಎಂದರು.
ಮೌಲಾನಾ ಅ್ತಾಬ್ ಇಮಾಮ್ ಖತೀಬ, ಉದ್ಯಮಿ ರೂಪಸಿಂಗ್ ಲೋನಾರೆ, ವಿಜಯಮಹಾಂತೇಶ ಸಾಲಿಮಠ ವಕೀಲರು, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಆರ್.ಎಸ್.ಹಿರೇಮಠ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಪರವೀನ್ ಮನಿಯಾರ, ಅ್ತಾಬ್ ಮನಿಯಾರ, ಮಹಿಬೂಬ ಮನಿಯಾರ, ಮಹ್ಮದ್‌ಆಸ್ೀ ಹಟ್ಟಿ, ಆಸೀಪ್ ಜಮಾದಾರ, ಮಹಮ್ಮದ್ ಸಾತಿಹಾಳ, ದಾದಾ ಎತ್ತಿನಮನಿ, ಐ.ಎಲ್.ಮಮದಾಪುರ, ಬಾಬಾ ಯಕೀನ್, ಮಹಿಬೂಬ ಯಕೀನ್ ಪಾಲ್ಗೊಂಡಿದ್ದರು. 400ಕ್ಕೂ ಹೆಚ್ಚು ಬಡಜನರಿಗೆ ಕಿಟ್ ವಿತರಿಸಲಾಯಿತು. ನೂರೇನಬಿ ನದಾ, ಮುಜಾಹೀದ್ ನಮಾಜಕಟ್ಟಿ ನಿರ್ವಹಿಸಿದರು.
ದೇಶದಲ್ಲಿ ಭಾವೈಕ್ಯ ಮೂಡಿಸುವ ಕಾರ್ಯ ಅಗತ್ಯವಾಗಿದೆ. ಹಿಂದು, ಮುಸ್ಲಿಮರನ್ನು ಕೇಸರಿ, ಹಸಿರು ಬಣ್ಣದ ಆಧಾರದಲ್ಲಿ ವಿಭಜಿಸುವುದು ಸಲ್ಲದು. ಪ್ರತಿಯೊಬ್ಬರೂ ತಿರಂಗಾ ಧ್ವಜ ಗೌರವಿಸಬೇಕು. -ಮೌಲಾನಾ ಅ್ತಾಬ ಇಮಾಮ ಖತೀಬ್, ಧರ್ಮಗುರು