ತಿ.ನರಸೀಪುರ: ಕೊನೇ ಆಷಾಢ ಶುಕ್ರವಾರ ಹಾಗೂ ಶನಿವಾರದ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್ ನೇತೃತ್ವದಲ್ಲಿ ಸ್ನೇಹ ಬಳಗದ ವತಿಯಿಂದ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಸಾರ್ವಜನಿಕರು ಹಾಗೂ ಭಕ್ತರಿಗೆ ದಾಸೋಹ ನಡೆಸಲಾಯಿತು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಸ್.ಮದನ್ ರಾಜ್, ಮುಖಂಡರಾದ ಮುದ್ದಬೀರನಹುಂಡಿ ಗೋವಿಂದರಾಜು, ರಮೇಶ್, ಪುಟ್ಟಸ್ವಾಮಿ, ರವಿ, ಪ್ರಕಾಶ, ನಾಗರಾಜು, ನಿಂಗರಾಜು, ಯೋಗೇಂದ್ರ, ವಿನಯ್, ಹರೀಶ್, ಮಹೇಶ್, ನಂಜುಂಡ, ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ದಾಸೋಹ ಸಮಿತಿ ಮುಖ್ಯಸ್ಥ ವಾಸುದೇವ್, ಪಾರು, ಪತ್ತೆದಾರ್ ದೀಪು, ವಿಜಯಕುಮಾರ್ ಇತರರು ಇದ್ದರು.