ಸಕಲೇಶಪುರ: ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ತೊಲೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾನೆ. ಬಡಾವಣೆಯ ಮೋಹನ್(35) ಮೃತ.
ಶುಕ್ರವಾರ ರಾತ್ರಿ ಪತ್ನಿ ಮಲಗಿದ ನಂತರ ಕೊಠಡಿಯ ತೊಲೆಗೆ ನೇಣು ಹಾಕಿಕೊಂಡಿ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.