ಶಾಸಕ ಸಿಮೆಂಟ್ ಮಂಜು ಸಲಹೆ
ಸಕಲೇಶಪುರ: ಪಟ್ಟಣವನ್ನು ಸಮಗ್ರವಾಗಿಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಬಿ.ಎಂ. ರಸ್ತೆಗೆ ಮರು ಡಾಂಬರಿಕರಣ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡದೆ ಕೆಲಸ ಮಾಡಬೇಕು. ಸದ್ಯ ರಸ್ತೆಯನ್ನು ಮರು ಡಾಂಬರೀಕರಣ ಮಾಡಿ, ಮುಂಬರುವ ದಿನಗಳಲ್ಲಿ ಸರ್ಕಾರದೊಂದಿಗೆ ಚರ್ಚಿಸಿ
ರಸ್ತೆ ವಿಸ್ತರಣೆ ಮಾಡಲಾಗುತ್ತದೆ ಎಂದರು. ಪುರಸಭಾ ಸದಸ್ಯರಾದ ಪ್ರದೀಪ್, ವನಜಾಕ್ಷಿ, ರೇಖಾ, ಬಿಜೆಪಿ ಮುಖಂಡರಾದ ಅಗ್ನಿ ಸೋಮಶೇಖರ, ಲೋಕೇಶ್, ಜಯಶಂಕರ್, ಮನೋಜ್, ಮದನ್ ಇತರರು ಹಾಜರಿದ್ದರು.