ಜಿಲ್ಲೆ

ನಾಡಿನ ಹಿತಕ್ಕಾಗಿ ಬದುಕಿದವರ ಜೀವನ ಸಾರ್ಥಕ

ಎ. ಆರ್. ರಘುರಾಮ

  ಶಾಸಕ ಸಿಮೆಂಟ್ ಮಂಜು ಅಭಿಮತ *  ಸಕಲೇಶಪುರದಲ್ಲಿ ಕೆಂಪೇಗೌಡ ಜಯಂತಿ * ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ಉಪಸ್ಥಿತಿ

ಸಕಲೇಶಪುರ: ಸಮಾಜದ, ನಾಡಿನ ಸ್ವಾಸ್ಥೃಕ್ಕಾಗಿ ಸದಾ ಚಿಂತಿಸುವವರು ಜೀವ ತೊರೆದ ನಂತರವೂ ಬದುಕಿರುತ್ತಾರೆ. ಅಂಥವರ ಸಾಲಿಗೆ ಕೆಂಪೇಗೌಡರೂ ಸೇರುತ್ತಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು. ಕೇವಲ ಕುಟುಂಬಕ್ಕಾಗಿ ಸೀಮಿತವಾಗದೇ ಸಮಾಜಕ್ಕಾಗಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಶೋಷಿತರ ಪರವಾಗಿ ಕೆಲಸ ಮಾಡಿದಾಗ ಜೀವನ ಅರ್ಥಪಡೆದುಕೊಳ್ಳುತ್ತದೆ ಎಂದರು. ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಅನಾದಿಕಾಲದಲ್ಲೇ ವೃತ್ತಿಗೆ ಅನುಗುಣವಾಗಿ ಬಡಾವಣೆಗಳನ್ನು ನಿರ್ಮಿಸುವಮೂಲಕ ಬೆಂಗಳೂರು ನಿರ್ಮಾಣಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರನ್ನು ಲೋಕ ಎಂದಿಗೂ ಮರೆಯಲಾಗದು ಎಂದರು.

ದೂರಗಾಮಿ ಚಿಂತನೆ: ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ಮಾತನಾಡಿ, ಇಂದಿನ ಬೃಹತ್ ಬೆಂಗಳೂರು ನಗರ ನಿರ್ಮಾಣವಾಗಲು ಅಡಿಪಾಯ ಹಾಕಿದ ಮಹನೀಯರು ಕೆಂಪೇಗೌಡರು. ಅವರ ದೂರಗಾಮಿ ಚಿಂತನೆ ಶ್ಲಾಘನೀಯ ಎಂದರು. ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನಗಾಥೆಯನ್ನು ಮತ್ತೊಂದು ತಲೆಮಾರಿಗೆ ಕೊಂಡೊಯ್ಯುವ ದೃಷ್ಟಿಯಿಂದ ವರ್ಷಕ್ಕೊಮೆ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರ ಆದರ್ಶ ಗಳನ್ನು ತಮ್ಮ ಬದುಕಿನಲ್ಲಿ ಆಳವಡಿಕೊಳ್ಳ ಬೇಕು ಎಂದರು.

ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನಗಾಥೆಯನ್ನು ಮತ್ತೊಂದು ತಲೆಮಾರಿಗೆ ಕೊಂಡೊಯ್ಯುವ ದೃಷ್ಟಿಯಿಂದ ವರ್ಷಕ್ಕೊಮೆ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಆಳವಡಿಕೊಳ್ಳ ಬೇಕು ಎಂದರು. ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್, ಮುಖಂಡ ಬೈರಮುಡಿ ಚಂದ್ರು, ಡಿವೈಎಸ್‌ಪಿ ಪ್ರಮೋದ ಕುಮಾರ್, ತಹಸೀಲ್ದಾರ್ ಅರವಿಂದ, ನಂದಿ ಕೃಪರಾಜು ಹಾಜರಿದ್ದರು.