ಜಿಲ್ಲೆ

ಪಠ್ಯದ ಜತೆಗೆ ಕೌಶಲವೂ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಥಿರ್ಗಳಿಗೆ ಪಠ್ಯ ಕಲಿಕೆಯ ಜತೆಗೆ ಇತರ ಕೌಶಲಗಳೂ ಮುಖ್ಯ. ಕೇವಲ ಪಠ್ಯ ಕಲಿಕೆಯಿಂದ ಗುರಿ ಸಾಧಿಸಲಾಗದು ಎಂದು ಜೆಎಸ್​ಎಸ್​ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
ವಿದ್ಯಾಗಿರಿ ಜೆಎಸ್​ಎಸ್​ ಕಾಲೇಜಿನ ಆವರಣದಲ್ಲಿ ಇತ್ತಿಚೆಗೆ ಆರಂಭಿಸಿದ ಶಕ್ತಿ ಕೌಶಲ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಶಕ್ತಿ ಕೌಶಲ ಕೇಂದ್ರದಲ್ಲಿ ಸ್ಪೋಕನ್​ ಇಂಗ್ಲಿಷ್​, ಸ್ಟಾಕ್​ ಮಾರ್ಕೆಟ್​ ಕೋರ್ಸಸ್​, ಕಂಪ್ಯೂಟರ್​ ಟ್ರೇನಿಂಗ್​ ವಿವಿಧ ನೌಕರಿಗಳಿಗೆ ಸಂಬಂಧಿಸಿದ ಸಟಿರ್ಫಿಕೆಟ್​ ಕೋರ್ಸಗಳ ತರಬೇತಿ ನೀಡಲಾಗುತ್ತದೆ. ಇಂತಹ ವಿಶೇಷ ತರಬೇತಿಗಳನ್ನು ವಿದ್ಯಾಥಿರ್ಗಳು ಪಡೆದರೆ ಉಜ್ವಲ ಭವಿಷ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಡಾ. ಎಸ್​.ಎನ್​.ಹೊಳಿಹೊಸೂರ, ಶೋಭಾ ಹೊಳಿಹೊಸೂರ, ಡಾ. ಸೂರಜ ಜೈನ, ಮಹಾವೀರ ಉಪಾಧ್ಯೆ, ರೇಖಾ ಹೊಳಿಹೊಸೂರ, ವಿದ್ಯಾಥಿರ್ಗಳು, ಇತರರು ಇದ್ದರು.