ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾಲೆಯ ಶಿಕ್ಷಕರಿಗೆ ವಿವಿಧ ಕೌಶಲಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟ ಅಂಕುರಮ್ ಎಜುಕೇಶಲ್ ಟ್ರಸ್ಟ್‌ನ ಶೈಕ್ಷಣಿಕ ತಂತ್ರಜ್ಞ ಅಕ್ಷಯ ಕೆ. ಪಣಿಕರ್ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿಯದೆ ಪಾಠ ಮಾಡಿದರೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗದು. ಆದ್ದರಿಂದ ಮಕ್ಕಳ ಮನಸ್ಸನ್ನು ನಮ್ಮೆಡೆಗೆ ಸೆಳೆದು ಪಾಠದಲ್ಲಿ ತೊಡಗಿಸಲು ಅಧ್ಯಾಪಕರು ಸದಾ ಪ್ರಯತ್ನಿಸಬೇಕು ಎಂದರು.
ಬೇಸ್ ಸಂಸ್ಥೆಯ ನಿರ್ದೇಶಕ ರಾಮಪ್ರಸಾದ್ ಎಚ್.ಎಸ್., ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಶರಣಕುಮಾರ ಮಾತನಾಡಿದರು. ಅಂಕುರಮ್ ಸದಸ್ಯರಾದ ರಂಜನ್ ಶ್ರೀರಾಮ, ಡಾ.ಶ್ರೀಪ್ರದಾ, ನೌಫಲ್ ಅಹ್ಮದ್, ಭರತ್ ಮತ್ತು ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.