ಗದಗ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರ ಸಹಯೋಗದಲ್ಲಿಆಸಕ್ತ 60 ಜನ ಮಹಿಳೆಯರಿಗೆ ಒಂದು ದಿನದ ಉದ್ಯಮಶೀಲತಾ ತಿಳುವಳಿಕಾ ಕಾರ್ಯಕ್ರಮದ ಉದ್ಘಾಟನೆ ಯು ಶನಿವಾರದಂದು ನಗರದ ಮಹೇಶ್ವರಿ ವಿವಿದೊದ್ದೇಶಗಳ ಮಹಿಳಾ ಮಂಡಳದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಉಮಾ.ಎಸ್. ಪಾಳೆಗಾರ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರವು ಮಹಿಳೆಯರಿಗಾಗಿ ಈ ತರಹದ ತರಬೇತಿಗಳನ್ನು ಆಯೋಜಿಸಲಾಗಿದೆ, ಈ ತರಬೇತಿಯಲ್ಲಿ ಎಲ್ಲರೂ ಯಶಸ್ವಿಯಾಗಿ ಪಾಲ್ಗೊಂಡು ತರಬೇತಿಯನ್ನು ಯಶಸ್ವಿಗೊಳಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಜಯಶ್ರೀ. ಬಿ. ಹಿರೇಮಠ ಅವರು ಇಂತಹ ತರಬೇತಿಗಳ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆದು ಆರ್ಥಿಕವಾಗಿ ಸಬಲರಾಗಿ ಮತ್ತು ಉದ್ಯಮಿಗಳಾಗಬೇಕೆಂದು ತಿಳಿಸಿದರು. .
ಸಿಡಾಕ್ ವತಿಯಿಂದ 2019ರಲ್ಲಿ 6 ದಿನಗಳ ಇ.ಡಿ.ಪಿ. ತರಬೇತಿ ಪಡೆದ ಶಿಭಿರಾರ್ಥಿ ಶ್ರೀಮತಿ ರಶ್ಮಿಕಾ. ಎ. ಹಿರೇಮಠ ಅವರು ಯಶಸ್ವಿ ಉದ್ಯಮಿದಾರರಾಗಿ ಭಾಗವಹಿಸಿದ್ದರು. ಸಿಡಾಕ್ ಧಾರವಾಡದ ಜಂಟಿ ನಿರ್ದೇಶಕರಾದ ಚಂದ್ರಶೇಖರ. ಎಚ್. ಅಂಗಡಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ತರಬೇತಿ ಬಗ್ಗೆ ವಿವರಿಸಿದರು. ಮಂಜುನಾಥ. ಮುಳಗುಂದ, ತರಬೇತುದಾರರು, ಸಿಡಾಕ್ ಗದಗ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿಜಯಲಕ್ಷ್ಮಿ ವಂಧಿಸಿದರು.
ಗದಗ ಜಿಲ್ಲೆಯ 60 ಮಹಿಳೆಯರು ತರಬೇತಿಯ ಲಾಭ ಪಡೆಯುತ್ತಿದ್ದಾರೆ.