ಕೋಲಾರ: ವರ್ಷದ ಹಿಂದೆ ಕೊಟ್ಟ ವಾತಿನಂತೆ ಜಿಲ್ಲೆಗೆ 3.86 ಕೋಟಿ ರೂಪಾಯಿ ವೆಚ್ಚದಲ್ಲಿ ಟೊವ್ಯಾಟೊ ಸಂಸ್ಕರಣಾ ಟಕ ಸ್ಥಾಪನೆಗೆ ಕ್ರಮಕೈಗೊಂಡಿದ್ದು, ಕೆಲಸ ಆರಂಭಿಸಲಾಗಿದೆ. ಲೋಕಸಭೆ ಚುನಾವಣೆಯೊಳಗೆ ಕಾಮಗಾರಿ ಮುಗಿಸಬೇಕು. ನಾನೇ ಉದ್ಘಾಟನೆಗೂ ಬರುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊರವಲಯದ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿ, ಭಾರತೀಯ ಕಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ರೈತರ ವಸತಿ ನಿಲಯ ಹಾಗೂ ಟೊಮಾಟೊ ಸಂಸ್ಕರಣಾ ಟಕದ ಭೂಮಿ ಪೂಜೆ ಸಂದರ್ಭದಲ್ಲಿ ಮಾತನಾಡಿದರು.
ಈ ಟಕ 120 ಟನ್ ಟೊಮಾಟೊ, ಮಾವಿನ ಋತುವಿನಲ್ಲಿ 80 ಟನ್ ವಾವಿನ ಹಣ್ಣು ಸಂಸ್ಕರಣೆ ವಾಡಲಿದೆ. ಜತೆಗೆ ವಾಲೂರು ತಾಲೂಕು ಚವ್ವೇನಹಳ್ಳಿಯಲ್ಲಿ ಶೀತಲೀಕರಣ ಟಕ ಸ್ಥಾಪಿಸಲು ಕೇಂದ್ರ ಸರ್ಕಾರ 5.32 ಕೋಟಿ ರೂಪಾಯಿ ಅನುದಾನವನ್ನು ನಬಾರ್ಡ್‌ಗೆ ಒದಗಿಸಿದೆ. ಶ್ರೀವಾಗಿ ನಬಾರ್ಡ್ ಅಧಿಕಾರಿಗಳ ಜತೆ ನಾನು ಹಾಗೂ ಜಿಲ್ಲಾಧಿಕಾರಿ ಮಾತನಾಡಿ, ಟೆಂಡರ್ ಕರೆದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
2013-14ರ ಬಜೆಟ್‌ನಲ್ಲಿ ಕೃಷಿಗೆ 23 ಸಾವಿರ ಕೋಟಿ ರೂಪಾಯಿ ಇತ್ತು. ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ, ಅವರಿಗೆ ಅನುಕೂಲ ಕಲ್ಪಿಸುವ ಕೆಲಸಗಳು ನಡೆದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರಾವರಿ ವ್ಯವಸ್ಥೆ ಇನ್ನೂ ಸಿಕ್ಕಿಲ್ಲ. ಹಣ್ಣು, ತರಕಾರಿ ಹೆಚ್ಚಾಗಿ ಬೆಳೆಯುವ ಕೋಲಾರದಲ್ಲಿ ಆಹಾರ ಪರೀಕ್ಷೆ ಪ್ರಯೋಗಾಲಯ ಸ್ಥಾಪಿಸಲಾಗುವುದು. ಇ-ವಾರುಕಟ್ಟೆ ವ್ಯವಸ್ಥೆಯಾಗಬೇಕಿದೆ. ಸ್ಟಾರ್ಟಪ್ ವಾಡಲಾಗುತ್ತಿದ್ದು, ತಾಜಾ, ಸಂಸ್ಕರಿಸಿದ ಆಹಾರ ವಿದೇಶಕ್ಕೆ ರ್ತು ವಾಡಲು ರೈತರು ಮುಂದಾಗಬೇಕು ಎಂದು ಕೇಂದ್ರ ಸಚಿವೆ ನುಡಿದರು.
ಕೋಲಾರದಲ್ಲಿ ಎಪಿಎಂಸಿಗೆ 38ಎಕರೆ ಅರಣ್ಯ ಭೂಮಿ ಮಂಜೂರಾತಿಗೆ ಸಹಕರಿಸುತ್ತೇನೆ. ಕೇಂದ್ರ ಅರಣ್ಯ ಸಚಿವರ ಜತೆ ವಾತನಾಡಿ, ಇಲಾಖೆಯ ಒಪ್ಪಿಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಟೊವ್ಯಾಟೊವನ್ನು ರಸ್ತೆಗೆ ಹಾಕುತ್ತಾರೆ. ವೈಜ್ಞಾನಿಕವಾಗಿ ಬೆಂಬಲ ಬೆಲೆ ಕೊಡಿಸುವ ಕೆಲಸವಾಗಬೇಕು. ವೈಜ್ಞಾನಿಕ ಬೆಂಬಲ ಬೆಲೆ ಕೊಡಿಸಬೇಕು ಎಂದರು.
ಜಿಲ್ಲಾಧಿಕಾರಿ ವೆಂಕಟ್‌ರಾಜಾ ವಾತನಾಡಿ, ಹೊಸ ಎಪಿಎಂಎಸಿ ಟೊವ್ಯಾಟೊಗೆ ಮೀಸಲಿರಿ, ಶೀತಲೀಕರಣ ಟಕ, ತ್ಯಾಜ್ಯ ಸಂಸ್ಕರಣೆ ಟಕ ಸ್ಥಾಪಿಸಲಾಗುತ್ತದೆ. ಈಗಿರುವ 18 ಎಕರೆಯ ಎಪಿಎಂಸಿಯನ್ನು ತರಕಾರಿ, ಹೂ ವಾರುಕಟ್ಟೆಗೆ ಬಳಕೆ ವಾಡಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾ ಕಷಿಕ ಸವಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ವಿಜ್ಞಾನಿ ಡಾ.ವೆಂಕಟ ಸುಬ್ರಮಣ್ಯ, ವಿ.ವಿ.ಕುಲಪತಿ ವಿಸಿ ಇಂದ್ರೇಶ್, ಜಿ ಪಂ ಸಿಇಒ ಯುಕೇಶ್ ಕುವಾರ್, ಡಾ.ಎಸ್.ಐ.ಅಥಣಿ, ಡಾ.ಎಚ್.ಎಸ್.ಶಿವರಾಂ, ವಿಜ್ಞಾನಿ ತುಳಸಿರಾಂ, ಸಂಶೋಧನಾ ನಿರ್ದೇಶಕ ಡಾ.ವಿ.ನಾಚೇಗೌಡ, ಕಷಿ ಅಧಿಕಾರಿ ಪಂಕಜಾ, ಪೂಜಾ ಇದ್ದರು.
ಆಹಾರ ಸಂಸ್ಕರಣೆಗೆ ಆದ್ಯತೆ
ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಮಾಲೂರಿನ ುಡ್ ಪಾರ್ಕ್‌ನಲ್ಲಿ 2 ಸಾವಿರ ಟನ್ ಟೊಮಾಟೊ ಶೀತಲೀಕರಣ ಟಕ ಹಾಗೂ ಶ್ರೀನಿವಾಸಪುರದಲ್ಲಿ ಸಾವಿರ ಟನ್ ವಾವು (ಪಲ್ಪ್) ಸಂಸ್ಕರಣೆ ಟಕವಿದ್ದು, ಕಡಿಮೆ ಬಾಡಿಗೆ ದರದಲ್ಲಿ ರೈತರು ಉಪಯೋಗ ಪಡೆದುಕೊಳ್ಳಬಹುದು. ಧಾನ್ಯ, ಹಣ್ಣು, ತರಕಾರಿ ರಕ್ಷಣೆ ವಾಡಿ ಆಹಾರ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ದೇಶಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರ್ತು ವಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಂಸ್ಕರಣೆ ಟಕ, ಶೀತಲಗೃಹಗಳ ನಿರ್ವಾಣ ಮತ್ತು ಜಲಸಂರಕ್ಷಣೆಗೆ ಹನಿ ನೀರಾವರಿಗೆ ಪ್ರೋತ್ಸಾಹ ನೀಡುತ್ತಿದೆ. ರೈತರಿಗೆ ತಂತ್ರಜ್ಞಾನ, ಬಿತ್ತನೆ ಬೀಜ, ಆವಿಷ್ಕಾರ, ಆಹಾರ ಸಂಸ್ಕರಣೆ, ಸಾವಯವ ಕಷಿ ಬಗ್ಗೆ ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೋಲಾರದಲ್ಲೇ ಉಳಿದುಕೊಂಡು ತರಬೇತಿ ಪಡೆಯಲು 80 ಲಕ್ಷ ರೂ.ವೆಚ್ಚ ದಲ್ಲಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕೋಲಾರ ರೈತರ ಮೇಲೆ ಗೌರವ
ಕೋಲಾರ, ಚಿಕ್ಕಬಳ್ಳಾಪುರ ರೈತರು ದೇಶದಲ್ಲೇ ಹೆಸರುವಾಸಿ. ಐಎಎಸ್, ಐಪಿಎಸ್ ಮತ್ತು ಕಷಿ, ತೋಟಗಾರಿಕೆ, ಪಶುಸಂಗೋಪನೆ ಅಧಿಕಾರಿಗಳು ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾತಾಳದಿಂದ ನೀರೆತ್ತಿ ಹಗಲಿರುಳೆನ್ನದೆ ಕಷಿವಾಡಿದ ರೈತಮಕ್ಕಳು ಅದೇ ರೀತಿ ಕಷ್ಟಪಟ್ಟು ಓದಿದ ಪರಿಣಾಮ ಇಂದು ದೇಶಾದ್ಯಂತ ಉನ್ನತ ಹುದ್ದೆಗಳಲ್ಲಿದ್ದಾರೆ. ಹೀಗಾಗಿ ಇವೆರಡು ಜಿಲ್ಲೆ, ಜನರ ಬಗ್ಗೆ ಅಪಾರ ಪ್ರೀತಿ, ಗೌರವವಿದೆ. ಅವಿಭಜಿತ ಕೋಲಾರ ಜಿಲ್ಲೆಗೆ ಇದು ಆರಂಭ, ಮುಂದೆ ಮತ್ತಷ್ಟು ಯೋಜನೆಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ವಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.