ಜಿಲ್ಲೆ

ಕೌಶಲ ವೃದ್ಧಿಗೆ ಹ್ಯಾಕ್​ಫೆಸ್ಟ್​ ಸಹಕಾರಿ

ಎಂ.ಎಸ್​.ಹಿರೇಮಠ ಬೆಳಗಾವಿ

ಬೆಳಗಾವಿ: ವಿದ್ಯಾರ್ಥಿಗಳ ಕೌಶಲ ವೃದ್ಧಿಸಲು ಹ್ಯಾಕ್​ಫೆಸ್ಟ್​ ಸಹಕಾರಿಯಾಗಿದ್ದು, ಸದುಪಯೋಗ ಪಡೆಯಬೇಕು ಎಂದು ಎಸ್​.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡಾ.ಎಫ್​.ವಿ. ಮಾನ್ವಿ ಸಲಹೆ ನೀಡಿದರು. ಇಲ್ಲಿನ ಶಿವಬಸವ ನಗರದ ಎಸ್​.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹ್ಯಾಕ್​ಫೆಸ್ಟ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಬಿ.ಆರ್​. ಪಟಗುಂದಿ, ಧಾರವಾಡ ಐಐಐಟಿಯ ಡಾ. ಸುನೀಲ ಸಿ.ಕೆ., ಡಾ.ಪ್ರಶಾಂತ ಭಗವತಿ, ಡಾ.ಬಿ.ಎಸ್​. ಹಲಕರ್ಣಿಮಠ, ಡಾ.ಅಶೋಕ ಹುಲಗಬಳಿ ಹಾಗೂ ಇತರರಿದ್ದರು.