ಗದಗ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ,ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮ ಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಮುಂಡರಗಿ ತಾಲೂಕಿನ ಸ್ವ-ಸಹಾಯ ಸಂಘದ ಸದಸ್ಯರಿಗಾಗಿ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಮಂಗಳವಾರದಂದು ಮುಂಡರಗಿ ತಾಲೂಕ ಪಂಚಾಯತ ಸಭಾಭವನದಲ್ಲಿ ಉದ್ಘಾಟಿಸಲಾಯಿತು.
ಮುಂಡರಗಿ ತಾ.,ಪಂ. ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ತರಬೇತಿಯಲ್ಲಿ ಎಲ್ಲರೂ ಪಾಲ್ಗೊಂಡು ತರಬೇತಿಯನ್ನು ಪಡೆದು ಉದ್ಯಮಶೀಲರಾಗಬೇಕೆಂದರು.
ಮುಂಡರಗಿ ಎಸ್.ಬಿ.ಐ. ವ್ಯವಸ್ಥಾಪಕರಾದ ಸತೀಶ ರಡ್ಡಿ ಭಾಗವಹಿಸಿ ಬ್ಯಾಂಕ್‍ನಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉದ್ಯಮ ಸ್ಥಾಪಿಸಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದೇವೇಂದ್ರ ಹಡಪದ, ಶ್ರೀಮತಿ ಶಾರದಾ ದೇ. ಹಡಪದ ಅವರು ಭಾಗವಹಿಸಿದ್ದರು. ಮೊದಲನೆ ದಿನದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೂಪಾ ಶೀರಿಯಪ್ಪಗೌಡ್ರ ಅವರು ಬೋಧಿಸಿದರು.
ಮಂಜುನಾಥ ಮುಳಗುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ವ-ಸಹಾಯ ಸಂಘದ 30 ಸದಸ್ಯರು ತರಬೇತಿಯ ಲಾಭ ಪಡೆಯುತ್ತಿದ್ದಾರೆ.