Skill Development Day 
ಜಿಲ್ಲೆ

ಕೌಶಲ ವೃದ್ಧಿಗೆ ಉದ್ಯಮ ಶೀಲ ತರಬೇತಿ ಪೂರಕ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಶಿಕ್ಷಣದ ನಂತರ ಪುರುಷ, ಮಹಿಳೆ ಎಂಬ ತಾರತಮ್ಯವಿಲ್ಲದೇ, ಉದ್ಯಮ ಶೀಲ ತರಬೇತಿ ಪಡೆಯುವುದರಿಂದ ಕೌಶಲ ವೃದ್ಧಿಯಾಗುತ್ತದೆ ಎಂದು ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಅಂಬರೀಷ್ ಹೇಳಿದರು.
ಪಟ್ಟಣದ ಹೋಬಳಿ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನೆಹರು ಯುವ ಕೇಂದ್ರ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಆಶ್ರಯದಲ್ಲಿ ಕೌಶಲಾಭಿವೃದ್ಧಿ ದಿನಾಚರಣೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಕೌಶಲಾಭಿವೃದ್ಧಿ ದಿನದ ವಿಶೇಷವಾಗಿ ವಿವಿಧ ತರಬೇತಿ ಹಮ್ಮಿಕೊಳ್ಳುವುದು ಹಾಗೂ ಉದ್ಯೋಗವಕಾಶ ಹೆಚ್ಚು ಮಾಡುವುದು ಪ್ರಮುಖ ಉದ್ದೇಶ ಎಂದರು.
ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಪ್ರತಿ ತಿಂಗಳು ಅನೇಕ ಕೌಶಲ ವೃದ್ಧಿಗೆ ಪೂರಕವಾದ ತರಬೇತಿ ಹಮ್ಮಿಕೊಳ್ಳುತ್ತಿದ್ದು, ಪ್ರಸಕ್ತ ಮಾಸದಲ್ಲಿ ಬ್ಯೂಟಿ ಪಾರ್ಲರ್ ತರಬೇತಿ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದೆ. ಇದರಿಂದ ಸ್ವಾವಲಂಭಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್, ಕಾರ್ಯದರ್ಶಿ ಎನ್.ಸುರೇಶ್, ಸಂಸ್ಥೆಯ ಸುಗುಣ, ನಾಗೇಶ್, ಪಟಾಲಪ್ಪ ಇದ್ದರು.