ಮುಳಬಾಗಿಲು: ತಾಲೂಕಿನ ನಿರುದ್ಯೋಗಿ ಯುವಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ಕೌಶಲ ಅಭಿವೃದ್ಧಿ ಕೇಂದ್ರ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ತಿಳಿಸಿದರು.
ನಗರದ ಹೊರವಲಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 20 ರಂದು ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 6 ಸಾವಿರಕ್ಕೂ ಹೆಚ್ಚು ನಿರುದ್ಯೋಗ ಯುವಕ, ಯುವತಿಯರು ಭಾಗವಹಿಸಿದ್ದರು. ಇದರಲ್ಲಿ 2 ಸಾವಿರಕ್ಕೂ ಹೆಚ್ಚಿನ ಯುವಕ, ಯುವತಿಯರು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಉಳಿದ ಎಲ್ಲರಿಗೂ ವಿವಿಧ ಕಂಪನಿಯಲ್ಲಿ ಉದ್ಯೋಗ ಕೊಡಿಸುವ ಸಂಕಲ್ಪ ಹೊಂದಲಾಗಿದೆ ಎಂದರು.
ಮೇಳದಲ್ಲಿ ಪಾಲ್ಗೊಂಡರೂ ಉದ್ಯೋಗ ಸಿಗದೇ ಇರುವ ನಿರುದ್ಯೋಗಿ ಯುವಕ, ಯುವತಿಯರು ನಿರಾಶೆ ಪಡುವ ಅಗತ್ಯವಿಲ್ಲ. ಅವರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ತಮ್ಮ ಹೆಸರುನ್ನು ನೋಂದಾಯಿಸಿ ಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಕಂಪನಿಗಳನ್ನು ಸಂಪರ್ಕಿಸಿ ಅವರಿಗೂ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಆ.22ರಂದು ದೀರ್ಸುಮಂಗಲಿ ಭವ:
ಆ.22 ರಂದು ಕಾಂಗ್ರೆಸ್ನಿಂದ ಮುಳಬಾಗಿಲು ತಾಲೂಕು ತಾಯಲೂರಿನ ಹೋಬಳಿ ವ್ಯಾಪ್ತಿಯ ದೂಲ್ಲಪಲ್ಲಿ, ಮೋತಕಪಲ್ಲಿ, ಎಮ್ಮೇನತ್ತ ಹಾಗೂ ತಾಯಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಅರಿಶಿಣ&ಕುಂಕುಮ, ಸೀರೆ&ಕುಪ್ಪಸ, ಬಾಗಿನ ಕೊಟ್ಟು ದೀರ್ "ಸುಮಂಗಲಿ ಭವ ಕಾರ್ಯಕ್ರಮ' ಆಯೋಜಿಸಲಾಗಿದ್ದು, ಸುಮಾರು 8 ಸಾವಿರ ಮಹಿಳೆಯರನ್ನು ಗೌರವಿಸಲಾಗುವುದು ಎಂದು ವಿ.ಆದಿನಾರಾಯಣ ತಿಳಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯ ಆರ್.ಆರ್ ರಾಜೇಂದ್ರಗೌಡ, ನಿರ್ದೇಶಕ ಎಂ.ಎನ್ ಶಂಕರ್ ನಾರಾಯಣಗೌಡ, ಸರ್ಕಾರದ ಗ್ಯಾರಂಟಿ ಅನುಷ್ಠಾನ ಉಸ್ತುವಾರಿ ಸಮಿತಿ ಅಧ್ಯೆ ಕೆ.ಎನ್ ಕೊಲದೇವಿ, ಉಮಾಶಂಕರ, ಉತ್ತನೂರು ವಿಎಸ್ಎಸ್ಎನ್ ಅಧ್ಯ ಗುಜ್ಜನಹಳ್ಳಿ ಆರ್. ಮಂಜುನಾಥ್, ತಾಪಂ ಮಾಜಿ ಅಧ್ಯ ಎಂ.ವೆಂಕಟರಾಮಣಪ್ಪ, ಎಪಿಎಂಸಿ ಮಾಜಿ ಅಧ್ಯ ಗೊಲ್ಲಹಳ್ಳಿ ವೆಂಕಟೇಶ, ಮುಖಂಡರಾದ ಎಂ.ಸಿ ಸರ್ವ ಗೌಡ, ಭೂ ಮಂಜೂರಾತಿ ಸಮಿತಿ ಸದಸ್ಯ ಜಮ್ಮನಹಳ್ಳಿ ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾ ಉಪಾಧ್ಯ ವಿ.ಕೆ. ರಾಜು, ಬೈರಕೂರು ರಾಮಾಂಜಿ ಇದ್ದರು.