Oplus_131072 
ಜಿಲ್ಲೆ

ಸ್ಕೇಟಿಂಗ್​ ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಆರ್​.ಎನ್​. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್​ ಸ್ಪರ್ಧೆಯಲ್ಲಿ ವಿವಿಧ ವಯೋಮಿತಿಯ 18 ಸ್ಕೇಟರ್​ಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅ. 20ರಂದು ಬೆಳಗಾವಿಯಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
14 ವರ್ಷದೊಳಗಿನ ಕ್ವಾಡ್​ ವಿಭಾಗದಲ್ಲಿ ಶೀತನ ಢವಳೆ, ಅಭಯ ಹಲವಾದಿಮಠ ಹಾಗೂ ಯಶಸ್​ ಅಂಕುಶಕರ ಆಯ್ಕೆಯಾದರು. ಬಾಲಕಿಯರ ವಿಭಾಗದಲ್ಲಿ ಅಮರೀನತಾಜ್​, ನೇತ್ರಾವತಿ ಕೋರಿ ಹಾಗೂ ಲಾವಣ್ಯ ಆಯ್ಕೆಯಾದರು. 14 ವರ್ಷದೊಳಗಿನ ಇನ್​ಲೈನ್​ ವಿಭಾಗದಲ್ಲಿ ನಿಹಾಲ್​ ಮೈಸೂರ, ಬಾಲಕಿಯರ ವಿಭಾಗದಲ್ಲಿ ಅತಿಕಾ ನದಾಫ್​, ಅಶ್ವಿನಿ ಹಾಗೂ ಆಜಾಂ ಆಯ್ಕೆಯಾದರು.
17 ವರ್ಷದೊಳಗಿನ ಬಾಲಕರ ಕ್ವಾಡ್​ ವಿಭಾಗದಲ್ಲಿ ಸಂದೇಶ ಹಿರೇಮಠ, ಮೊಹಮ್ಮದ ಯಾಸೀರ, ವಿನಯ ಅಂಕುಶಕರ, ಬಾಲಕಿಯರ ವಿಭಾಗದಲ್ಲಿ ಸೌಜನ್ಯ ಶೇಷಗಿರಿ, ಮೈಥಿಲಿ ಆಯ್ಕೆಯಾದರು. ಇನ್​ಲೈನ್​ ಬಾಲಕರ ವಿಭಾಗದಲ್ಲಿ ಸೋಹಿಲ್​ ನದಾಫ್​, ಆದಿತ್ಯ ಪಾಟೀಲ ಹಾಗೂ ಬಾಲಕಿಯರ ವಿಭಾಗದಲ್ಲಿ ಯಾಸ್ಮೀನ್​ ತಹಶೀಲ್ದಾರ ಆಯ್ಕೆಯಾಗಿದ್ದಾರೆ.
ಇದಕ್ಕೂ ಪೂರ್ವದಲ್ಲಿ ಜಿಲ್ಲಾ ಸಮನ್ವಯಾಧಿಕಾರಿ ಎಸ್​.ಎಂ.ಹುಡೇದಮನಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ವಿಜೇತ ಹಾಗೂ ರಾಜ್ಯಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಒಲಿಂಪಿಕ್​ ಅಸೋಸಿಯೇಶನ್​ ಮಾಜಿ ಅಧ್ಯಕ್ಷ ಪಿ.ಎಚ್​. ನೀರಲಕೇರಿ ಬಹುಮಾನ ವಿತರಿಸಿ ಮಾತನಾಡಿ, ಈ ಮೊದಲು ಜಿಲ್ಲಾಧಿಕಾರಿ ಮನೆ ಎದುರು ಆಡುತ್ತಿದ್ದ ಸ್ಕೇಟರ್​ಗಳಿಗೆ ಶಾಶ್ವತ ಮೈದಾನ ಲಭಿಸಿದೆ. ಇದು 100 ಮೀ.ಮಾತ್ರ ಇದ್ದು 200 ಮೀ. ಟ್ರ್ಯಾಕ್​ ಆಗಿ ಅಭಿವೃದ್ಧಿಯಾಗಬೇಕು. ಈ ಮೂಲಕ ಸ್ಕೇಟರ್​ಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳನ್ನು ಪಡೆಯಲಿ ಎಂದು ಆಶಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಶಶಿಧರ ಬಸಾಪುರ, ಸುನೀಲ ಹೊಂಗಲ, ಕೆ.ಎನ್​. ಮುಗಳಿ, ತರಬೇತುದಾರರಾದ ಮಲ್ಲಿಕಾರ್ಜುನ ಕಾಡಪ್ಪನವರ, ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರುಪಾಕ್ಷ ಕಮ್ಮಾರ, ಇತರರು ಇದ್ದರು.