ಎಸ್.ಕೆ.ಬೆಳ್ಳುಬ್ಬಿ 
ಜಿಲ್ಲೆ

ಯುವಜನತೆ ಕನ್ನಡ ನಾಡು ನುಡಿ ಉಳಿವಿಗೆ ಶ್ರಮಿಸಲಿ

ಬಸವನಬಾಗೇವಾಡಿ: ಯುವಪೀಳಿಗೆ ಕನ್ನಡ ಭಾಷೆ ಮತ್ತು ನಾಡು-ನುಡಿಯ ಉಳಿವಿಗಾಗಿ ಶ್ರಮಿಸಬೇಕು. ಹೆಚ್ಚಾಗಿ ಮಾತೃಭಾಷೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿಯ ದೇವಸ್ಥಾನದ ಆವರಣದಲ್ಲಿ ಜರುಗಿದ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಬೇಕು. ನಾವೆಲ್ಲರೂ ಕನ್ನಡ ಕಟ್ಟಾಳುಗಳಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಡೋಣೂರ, ಮಾಜಿ ಅಧ್ಯಕ್ಷ ನಿಂಗಪ್ಪ ಬೊಮ್ಮನಹಳ್ಳಿ, ಕ.ಸಾ.ಪ. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಎಚ್. ಎಸ್.ಪಾಟೀಲ, ನೀಲು ನಾಯಕ, ರಾಜೇಸಾಬ ಶಿವನಗುತ್ತಿ, ದ್ಯಾಮಪ್ಪ ರೂಡಗಿ, ಯಲ್ಲಪ್ಪ ಇಟಗಿ, ಯಲಗೂರದಪ್ಪ ಸುಭಾನಪ್ಪರ, ಬಸಪ್ಪ ಹುಲಬೆಂಟಿ, ವಿಠ್ಠಲಗೌಡ ಬಿರಾದಾರ, ಪರು ಕೊಲ್ಹಾರ, ಮುತ್ತಣ್ಣ ಬಂಡಿವಡ್ಡರ, ಬಸವರಾಜ ಹೂಗಾರ, ಸಿದ್ದು ಕಲಗುರ್ಕಿ, ಬಸಪ್ಪ ಚಲವಾದಿ, ಡಾ.ಬಸವರಾಜ ಹಡಪದ ಇತರರಿದ್ದರು.

ಪ್ರಕಾಶ ಮಸಬಿನಾಳ ಸ್ವಾಗತಿಸಿದರು. ಶಾಂತಾ ಚೌರಿ, ಎಸ್.ಬಿ.ನಡಕಟ್ಟಿ ನಿರೂಪಿಸಿದರು. ಸಮಿಉಲ್ಲಾ ಸೈಯ್ಯದ್, ಸೋಮಲಿಂಗ ಹೊಸಮನಿ, ಬಸವರಾಜ ಕೂಡಗಿಮಠ, ವಾಸುದೇವ ಮ್ಯಾಗೇರಿ ವಂದಿಸಿದರು.