ಜಿಲ್ಲೆ

ಕಾರ್ಮಿಕರ ಆರೋಗ್ಯ ಕಾಳಜಿಗೆ ಮೊಬೈಲ್ ಕ್ಲಿನಿಕ್

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ನೂರು ಸಂಚಾರಿ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಕರ್ನಾಟಕ ಕಟ್ಟಡ‌ ಮತ್ತು ಇತರೆ ನಿರ್ಮಾಣ ‌ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಎ.ಎಚ್. ಉಮೇಶ ಹೇಳಿಕೆ.

ನಗರದ ಯಮನಾಪುರ ಕೈಗಾರಿಕಾ ಪ್ರದೇಶದ ಶ್ರಮಿತ ತಾತ್ಕಾಲಿಕ ವಸತಿ ಸಮುಚ್ಚಯ ಲೋಕಾರ್ಪಣೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಕಾಟ್ ೯ ಕಾಡ್೯ ವಿತರಣೆ ಕಾರ್ಯಕ್ರಮದಲ್ಲಿ ‌ಮಾತನಾಡಿದ ಅವರು, ಡಾಕ್ಟರ್, ನಸ್೯ ಸಿಬ್ಬಂದಿ ಒಳಗೊಂಡಿರುವ ಮೊಬೈಲ್ ಕ್ಲಿನಿಕ್ ಗಳು ಕಟ್ಟಡ ನಿರ್ಮಾಣ ಆಗುತ್ತಿರುವ ಸ್ಥಳದಲ್ಲಿಯೇ ಹೋಗಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಮೊಬೈಲ್ ಕ್ಲಿನಿಕ್ ‌ಗಳನ್ನು ಕಮಾಂಡ್ ಸೆಂಟರ್ ಮೂಲಕ‌ ನಿರ್ವಹಣೆ‌ ಮಾಡಲಾಗುತ್ತಿದೆ ಎಂದರು.

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಿರಂತರವಾಗಿ‌ ನಡೆಯಲಿದೆ. 20 ತರಹದ ಪರೀಕ್ಷೆಗಳನ್ನು ನಡೆಸಲಾಗುವುದು.‌ಅಲ್ಲದೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಸೇವಾ ಕೇಂದ್ರದ‌ ಮೂಲಕ ಎಲ್ಲ ಸೌಲಭ್ಯ ಪಡೆದುಕೊಳ್ಳುವ ಅನುಕೂಲ ಕಲ್ಪಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ 3 ಎಕರೆ‌ಪ್ರದೇಶದಲ್ಲಿ 528 ಕಾರ್ಮಿಕರ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು‌ ವಿವರಿಸಿದರು.