ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲ ದಿನಗಳಿಂದ ಸುರಿದ ಸತತ ಮಳೆಯಿಂದಾಗ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದ 7 ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷ್ಮಣ ಹನಮಂತಪ್ಪ ಗಾಳಿ ಎಂಬುವರ ಮನೆ ನಿರಂತರ ಮಳೆಯಿಂದ ಶಿಥಿಲಗೊಂಡಿತ್ತು. ಗೋಡೆಯ ಪಕ್ಕದಲ್ಲಿ ಗಾಳಿ ಕುಟುಂಬದ ಮಹಿಳೆಯರು, ಮಕ್ಕಳು ಸೇರಿ 7 ಜನ ಮಲಗಿದ್ದರು. ತಡರಾತ್ರಿ ಮಣ್ಣು ಉದುರಿದ ಸದ್ದು ಕೇಳಿದ್ದರಿಂದ ಮಹಿಳೆಯರು ಎಚ್ಚರಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳ ಬದಲಾಯಿಸುವಷ್ಟರಲ್ಲಿ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.