ಜಿಲ್ಲೆ

ಹುರಳಿಕುಪ್ಪಿ ಪ್ಯಾಕ್ಸ್ ಗೆ ಶಿವಾನಂದ ಅಧ್ಯಕ್ಷ

ವೀರೇಶ ಸೌದ್ರಿ

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪ್ಯಾಕ್ಸ್) ಅಧ್ಯಕ್ಷರಾಗಿ ಶಿವಾನಂದ ತಿಪ್ಪಕ್ಕನವರ ಹಾಗೂ ಉಪಾಧ್ಯಕ್ಷರಾಗಿ ವಿರೂಪಾಕ್ಷಪ್ಪ ಅಜ್ಜಣ್ಣನವರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸದಸ್ಯ ಸುಭಾಸ ಗಡೆಪ್ಪನವರ ಮಾತನಾಡಿ, ರೈತರ ಜೀವನಾಡಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮ ವಹಿಸುವುದು ಅವಶ್ಯವಾಗಿದೆ. ಹುರಳಿಕುಪ್ಪಿ, ಚಳ್ಳಾಳ ಹಾಗೂ ಮಾವುರ ಸೇರಿದಂತೆ ಗ್ರಾಮೀಣ ಪ್ರದೇಶದ ರೈತರು, ಸಂಘದ ಸದಸ್ಯರ ಸಹಕಾರ ಪಡೆದು ತಾಲೂಕು ಹಾಗೂ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನಾಗಿಸಬೇಕು ಎಂದರು.

ಸದಸ್ಯರಾದ ಸುನೀಲ ಬೆಂಡಿಗೇರಿ, ರಾಮಪ್ಪ ವೈಯಾಳಿ, ಮಂಜುನಾಥ ಅಡಿವೆಪ್ಪನವರ, ಇಸಾಕಅಹ್ಮದ ಮುಲ್ಲಾ, ನೀಲಕಂಠಪ್ಪ ಕಬ್ಬೂರ, ಭೀಮಪ್ಪ ಹರಿಜನ, ಲಲಿತಾಬಾಯಿ ಪಾಟೀಲ, ತುಳಜವ್ವ ಸವಣೂರ, ಪ್ರವೀಣಕುಮಾರ ಕಮಡೊಳ್ಳಿ, ಪ್ರಮುಖರಾದ ಪಾಂಡಪ್ಪ ತಿಪ್ಪಕ್ಕನವರ, ಎಂ.ಕೆ. ಬಿಜ್ಜೂರ, ಎಸ್.ಎನ್. ಕಲಕೋಟಿ, ನಾಗಪ್ಪ ತಿಪ್ಪಕ್ಕನವರ, ಎಂ.ಜೆ. ಮುಲ್ಲಾ, ಅಶೋಕ ಯಲಿಗಾರ, ಮಲ್ಲಪ್ಪ ಹೊಸಳ್ಳಿ, ನಿಂಗಪ್ಪ ಯರೇಶಿಮಿ, ಕುಮಾರ ಹೊಸಳ್ಳಿ, ಏಕಪ್ಪ ಬಿಜ್ಜೂರ, ರಾಮನಗೌಡ ಪಾಟೀಲ, ಟಿ.ಪಿ. ಪಾಟೀಲ, ಸಿದ್ದನಗೌಡ ಪಾಟೀಲ, ಮುದಕಪ್ಪ ಹೊಸಳ್ಳಿ, ಆನಂದ ಬಡಿಗೇರ, ಬೀರಪ್ಪ ಅಜ್ಜಣ್ಣನವರ ಹಾಗೂ ಇತರರು ಇದ್ದರು.

ಚುನಾವಣಾಧಿಕಾರಿಯಾಗಿ ಮಂಜುಳಾ ಸಜ್ಜನ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಿದರು. ಸಂಘದ ಕಾರ್ಯದರ್ಶಿ ಎಸ್.ಎಂ. ಮುಲ್ಲಾ ನಿರ್ವಹಿಸಿದರು.