ಜಿಲ್ಲೆ

ಶಿವಗಂಗಾ ಫಾಲ್ಸ್ ನೋಡಲು ಹೋದ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ನೀರುಪಾಲು!

theerthaswamy

ಉತ್ತರಕನ್ನಡ: ಜಲಪಾತ ನೋಡಲು ಹೋದ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ಯುವಕ ನೀರುಪಾಲಾಗಿರುವ ಘಟನೆ ಶಿರಸಿ ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗಾ ಫಾಲ್ಸ್ ನಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಹೆಗಡೆ‌ (18) ನೀರುಪಾಲಾದ ವಿದ್ಯಾರ್ಥಿ. ಮುಂಡಗೋಡು ತಾಲೂಕಿನ ಚಿಪಗೇರಿಯ ನಿವಾಸಿ ಎಂದು ತಿಳಿದುಬಂದಿದೆ. ಮೂರು ಜನ ವಿದ್ಯಾರ್ಥಿಗಳು ಫಾಲ್ಸ್ ಗೆ ತೆರಳಿದ್ದು, ಈ ವೇಳೆ ಓರ್ವ ನೀರುಪಾಲಾಗಿದ್ದಾನೆ.

ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿದ್ದು, ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.