ಬೆಟ್ಟದಪುರ: ಬೆಟ್ಟದಪುರ ಸಮೀಪದ ಕೋಮಲಾಪುರ ಗ್ರಾಮದಲ್ಲಿ ಕುಸುಮ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರೈಸ್ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಸೋಮವಾರ ಭೇಟಿ ನೀಡಿ ಸರ್ಕಾರದ ಗೋಮಾಳವನ್ನು ಪರಿಶೀಲಿಸಿದರು.
ಈ ಯೋಜನೆಯಿಂದ ರೈತರು ಆದಾಯ ಹೆಚ್ಚಿಸಲು ಹಾಗೂ ಆಧುನಿಕತೆಯ ಬೇಸಾಯಕ್ಕಾಗಿ ಅನುಕೂಲವಾಗುವ ದೃಷ್ಟಿಯಿಂದ, ದೇಶಾದ್ಯಂತ ಸೌರ ಪಂಪ್‌ಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸರ್ಕಾರ ಈ ಯೋಜನೆಯನ್ನು ರೈತರಿಗಾಗಿ ಅನುಷ್ಠಾನಕ್ಕೆ ತರಲಾಗಿದೆ. ಅದೇ ರೀತಿ ಈ ಗ್ರಾಮದ ಸರ್ವೇ ನಂಬರ್ 105,106,107,108/1,111/1 ಒಟ್ಟು 46 ಎಕರೆ ಪರಿಶೀಲಿಸಲಾಗಿದೆ. ಇದರಿಂದ ರೈತರಿಗೆ ತಮ್ಮ ಕೃಷಿ ಪಂಪ್‌ಗಳನ್ನು ಸೋಲಾರೈಸ್ ಮಾಡುವ ಮೂಲಕ ಬೇಸಾಯಕ್ಕೆ ಅನುಕೂಲವಾಗಲಿದೆ. ಎಲ್ಲ ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದರು.