ಆನೇಕಲ್​ ಶ್ರೀರಾಮ ಕುಟೀರದಲ್ಲಿ ಮೆಣಸಿನಹಳ್ಳಿಯ ಬಸವೇಶ್ವರ ಕಲಾ ಮಂಡಳಿಯಿಂದ "ಸೀತಾಪಹರಣ' ನಾಟಕ ಪ್ರದರ್ಶನ ನಡೆಯಿತು. 
ಜಿಲ್ಲೆ

ಮನಸೂರೆಗೊಂಡ ಸೀತಾಪಹರಣ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಪಟ್ಟಣದ ಶ್ರೀರಾಮ ಕುಟೀರದಲ್ಲಿ ಮೆಣಸಿನಹಳ್ಳಿಯ ಬಸವೇಶ್ವರ ಕಲಾ ಮಂಡಳಿಯಿಂದ "ಸೀತಾಪಹರಣ' ನಾಟಕ ಪ್ರದರ್ಶನ ನಡೆಯಿತು. ನಾಟಕದ ಎಲ್ಲ ಪಾತ್ರಗಳನ್ನು ಮಹಿಳೆಯರೇ ಅಭಿನಯಿಸಿದ್ದು ವಿಶೇಷ. ನಾಟಕ ವೀಸಲು ಪಟ್ಟಣದ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿದ್ದರು.

ಎಂ.ಚಂದ್ರಪ್ಪ ಮತ್ತು ಎಂ.ಸಿ.ಯೋಗನಂದೀಶ್​ ಆರಾಧ್ಯ ನಿರ್ದೇಶನದಲ್ಲಿ ನಾಟಕ ಪ್ರದರ್ಶನವಾಯಿತು. ದಶರಥನಾಗಿ ಪಲ್ಲವಿ ಸಂದೇಶ್​, ಶ್ರೀರಾಮನಾಗಿ ಚೈತ್ರಾ ಭರತ್​, ಲಕ್ಷ$್ಮಣನಾಗಿ ಮಂಜುಳಾ ಮಂಜುನಾಥ್​, ಭರತನಾಗಿ ಭಾರತಿ ಬಸವರಾಜು, ಶತ್ನೃನಾಗಿ ಭಾರ್ಗವಿ ಮಂಜುನಾಥ್​, ರಾವಣನಾಗಿ ರೇಣುಕಾ ಕುಮಾರ್​, ಕೈಕೆಯಾಗಿ ಸಹನಾ ಸಂತೋಷ್​, ಸೀತೆಯಾಗಿ ಪ್ರಶಾಂತಿ ವಿನೋಧ್​ ಕುಮಾರ್​, ಕಲಹಂಸಿಕೆಯಾಗಿ ಧನ್ಯಾ, ಸಖಿಯಾರಗಿ ಪೂರ್ಣಶ್ರೀ, ಕೃತಿ, ಗುಹ ಮತ್ತು ಜಟಾಯು ಪಾತ್ರದಲ್ಲಿ ದೀಪಕ್​ ಅಭಿನಯಿಸಿದರು.

ಒಂದೇ ಕುಟುಂಬದವರು! : ಆನೇಕಲ್​ನ ಎಂ.ಚಂದ್ರಪ್ಪ ಮತ್ತು ಕುಟುಂಬದವರು ಸೀತಾಪಹರಣ ನಾಟಕ ಪ್ರದರ್ಶಿಸಿದ್ದು, ಕುಟುಂಬದ 10ಕ್ಕೂ ಹೆಚ್ಚು ಸದಸ್ಯರು ಪಾತ್ರ ಮಾಡಿ, ಕಲಾಪ್ರೇಮ ಮೆರೆದರು.