ಜಿಲ್ಲೆ

ಸೀತಾರಾಮ ಕಲ್ಯಾಣೋತ್ಸವ ಸಂಪನ್ನ

ಲಿಂಗದಹಳ್ಳಿ: ದೇವನೊಬ್ಬ ನಾಮ ಹಲವು ಎಂಬಂತೆ ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು ಯುಗ ಯುಗಕ್ಕೆ ಹೊಸ ಅವತಾರ ತಾಳಿ ದುಷ್ಟರನ್ನು ಶಿಕ್ಷಿಸುತ್ತಿರುವುದರಿಂದ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ವಿಶ್ವ ಸಮತೋಲನದಿಂದ ಕೂಡಿದೆ ಎಂದು ಲಿಂಗದಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಲ್.ವಿ.ಓಂಕಾರಸ್ವಾಮಿ ಹೇಳಿದರು.

ತಣಿಗೆಬೈಲು ಗ್ರಾಮದಲ್ಲಿ ಸೀತಾ ರಾಮ ಕಲ್ಯಾಣೋತ್ಸವ ಕಾರ್ಯಕ್ರಮದ ನಂತರ ನಡೆದ ಧಾರ್ಮಿಕ ಸಮಾರಂಭ ಉದ್ದೇಶಿಸಿ ಮಾತನಾಡಿ, ಹಿಂದು ಧರ್ಮದಲ್ಲಿ ಹಬ್ಬ, ಜಾತ್ರಾ ಮಹೋತ್ಸವಗಳಲ್ಲಿ ಮುಕೋಟಿ ದೇವರುಗಳನ್ನು ಪೂಜಿಸುತ್ತಿದ್ದರು ಎಂದು ಹೇಳಿದರು. ರಾಮಸೇವಾ ಸಮಿತಿ ಗೌರವಾಧ್ಯಕ್ಷ ಶಂಕರ ಲಿಂಗೇಗೌಡ ಮಾತನಾಡಿ, ತಣಿಗೆಬೈಲು ಸುತ್ತಮುತ್ತ ಪರಶಿವನ ಮತ್ತು ಮಹಾ ವಿಷ್ಣುವಿನ ಅಪರಾವತರಗಳಾಗಿರುವ ಶ್ರೀ ನಾಗಲಿಂಗೇಶ್ವರ, ಹೊಳೆ ರಾಯಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ , ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಸೀತಾರಾಮ ದೇವರು , ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ, ಕೋಟೆ ರಂಗನಾಥಸ್ವಾಮಿ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಸೇರಿದಂತೆ ವಿವಿಧ ಹರಿ ಹರರ ದೇವಾಲಯಗಳಲ್ಲಿ ಕೆಲವು ಶಿಥಲಗೊಂಡಿದ್ದು, ಅವುಗಳನ್ನು ಶೀಘ್ರದಲ್ಲಿ ಅಭಿವೃದ್ಧಿಗೊಳಿಸಬೇಕು ಎಂದರು.

ಶ್ರೀರಾಮ ದೇವರ ಸೇವಾ ಸಮಿತಿ ಗೌರವಾಧ್ಯಕ್ಷ ಎನ್.ಶಂಕರಲಿಂಗೇಗೌಡ, ಅಧ್ಯಕ್ಷ ಕೆ.ಗೋಪಾಲಣ್ಣ, ಕಾರ್ಯದರ್ಶಿ ಕೆ.ಶಿವಕುಮಾರ್, ಖಜಾಂಚಿ, ಶಿಂಗ್ರಪ್ಪ, ಶ್ರೀಧರ್, ಬಂಜಾರ ಸಮಾಜದ ಗೌರವಾಧ್ಯಕ್ಷ ಆರ್.ಸತ್ಯಪ್ಪ, ಶ್ರೀದೇವಿ ಸತೀಶ್, ಮನೋಜ್ ಕುಮಾರ್, ಆರ್.ರಾಮಯ್ಯ ಮೋಹನ ರಾಜು ಇದ್ದರು.