ಜಿಲ್ಲೆ

ಹೋರಾಟ ಹತ್ತಿಕ್ಕುವ ಕಾರ್ಯ ಸಲ್ಲದು

ಸಿರವಾರ: ಹೋರಾಟ ಹತ್ತಿಕ್ಕುವ ನಡೆಯನ್ನು ಖಂಡಿಸಿ ಕರವೇ ಮುಖಂಡರು ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರೆ ವಾಸವಿಗೆ ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣಕ್ಕೆ ಕುಡಿಯುವ ನೀರಿನ ಕೆರೆಗೆ ಮೀಸಲಿಡಲಾಗಿದ್ದ ಜಮೀನಿನ ಮಣ್ಣನ್ನು ರಸ್ತೆ ಕಾಮಗಾರಿಗೆ ಅಕ್ರಮವಾಗಿ ನೀಡಲಾಗಿದೆ. ಇದನ್ನು ಪ್ರಶ್ನಿಸಿದ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕು ಘಟಕದ ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ ಅವರ ಮೇಲೆ ಪ.ಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ. ಇದು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ. ಕೇಸ್‌ನ್ನು ಎರಡು ದಿನಗಳಲ್ಲಿ ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರವೇ ಮುಖಂಡರಾದ ವೆಂಕಟೇಶ ಶಂಕ್ರೀ, ಯಲ್ಲಪ್ಪ ದೊರೆ,ಡಿ.ಮೇಷಕ್, ರವಿ ಕುಮಾರ ಮಲ್ಲಟ, ನಾಗೇಶ, ಮುದುಕಪ್ಪ, ಹನುಮೇಶ ಶಾಖಾಪೂರು, ಮೌನೇಶ, ಹನುಮಂತ, ವೀರೇಶ ನಾಯಕ, ರಾಮಸ್ವಾಮಿ, ಚನ್ನಬಸವ, ಹುಲಿಗೆಪ್ಪ ಮಡಿವಾಳ ಇತರರಿದ್ದರು.