ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಆಸರೆಯಡಿ ಸಿರವಾರದ ನೀಲಮ್ಮ ಕಾಲನಿಯ ಜಾಹಿರಾಬೀ ಅವರಿಗೆ ಮನೆ ಹಸ್ತಾಂತರಿಸಲಾಯಿತು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಸದಸ್ಯ ಕೃಷ್ಣ ನಾಯಕ, ಸಿಪಿಐ ಶಶಿಕಾಂತ ಎಂ, ಯೋಜನೆ ಜಿಲ್ಲಾ ನಿರ್ದೇಶಕ ಮೋಹನ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಖಜಾಂಚಿ ಅಯ್ಯನಗೌಡ ಏರಡ್ಡಿ, ಚುಕ್ಕಿ ಸೂಗಪ್ಪ ಇತರರಿದ್ದರು.  
ಜಿಲ್ಲೆ

ಅಸಹಾಯಕರಿಗೆ ವಾತ್ಸಲ್ಯ ಆಸರೆ

ಶಾಮಸುಂದರ್ ಕೊಪ್ಪಳಕರ್

ಸಿರವಾರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಆಸರೆಯಡಿ ಅಸಹಾಯಕ ಮಹಿಳೆಯರಿಗಾಗಿ ನಿರ್ಮಿಸಿ ಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಪಟ್ಟಣದಲ್ಲಿ ಮಂಗಳವಾರ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಚಂದ್ರಹಾಸ ಅವರು ನೀಲಮ್ಮ ಕಾಲನಿಯ ಜಾಹಿರಾಬೀ ಅವರ ಜೀವನ ನಿರ್ವಹಣೆಗೆ ಈಗಾಗಲೇ ಪ್ರತಿ ತಿಂಗಳು 1 ಸಾವಿರ ರೂ.ಮಾಶಾಸನ ನೀಡಲಾಗುತ್ತಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಜಾಹಿರಾಬೀ ಅವರಿಗೆ ವಾತ್ಸಲ್ಯ ಆಸರೆ ಯೋಜನೆಯಡಿ ಮನೆ ನಿರ್ಮಿಸಲು 1.15 ಲಕ್ಷ ರೂ. ಮಂಜೂರಾತಿ ನೀಡಲಾಗಿತ್ತು. ಇಂತಹ ಸಾವಿರಾರು ಮಹಿಳೆಯರ ಏಳಿಗೆಗೆ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ಮಾತೋಶ್ರೀ ಹೇಮಾವತಿ ಅಮ್ಮ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.