ಜಿಲ್ಲೆ

ಜನರಿಗೆ ತಲುಪಿಸೋಣ ಯೋಜನೆಗಳ ಮಾಹಿತಿ

ಅಶೋಕ್ ಕುಮಾರ್ ಎನ್

ಸಿರವಾರ: ಪಟ್ಟಣದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನಕ್ಕೆ ಪಕ್ಷದ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ ಭಾನುವಾರ ಚಾಲನೆ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಶ್ರಮಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಪ್ರತಿ ಮನೆಗೆ ತಲುಪಿಸಬೇಕು ಎಂದರು.

ಬಳಿಕ ಬಸವೇಶ್ವರ ಕಾಲೇಜಿನಲ್ಲಿ ಬೂತ್ ಅಧ್ಯಕ್ಷರ ಮತ್ತು ಕಾರ್ಯಕರ್ತರ ಸಭೆ ನಡೆಯಿತು. ಮಾಜಿ ಶಾಸಕ ಗಂಗಾಧರ ನಾಯಕ, ಪ್ರಮುಖರಾದ ಅಯ್ಯಪ್ಪ ಮ್ಯಾಕಲ್, ಮಲ್ಲಪ್ಪ ಕಜ್ಜಿ, ಕೃಷ್ಣ ನಾಯಕ, ರಾಮಯ್ಯ ಬೈನೆರ್, ರಾಜು ನಾಯಕ, ಕೆ.ನಾಗಲಿಂಗಸ್ವಾಮಿ, ವೀರೇಶ ನಾಯಕ ಬೆಟ್ಟದೂರು, ಭೀಮಣ್ಣ ನಾಯಕ ಹರವಿ ಇದ್ದರು.