ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಆಟ ಅಗತ್ಯ; ಮಯೂರ ಮಿತ್ರ ಮಂಡಳಿ ಅಧ್ಯಕ್ಷ ಟಿ.ಎಂ.ಉಮೇಶ ಅಭಿಮತ

ಸಿರಗುಪ್ಪ: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆಟೋಟಗಳಲ್ಲಿ ತೊಡಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮಯೂರ ಮಿತ್ರ ಮಂಡಳಿ ಅಧ್ಯಕ್ಷ ಟಿ.ಎಂ.ಉಮೇಶ ಹೇಳಿದರು.ತಾಲೂಕಿನ ತೆಕ್ಕಲಕೋಟೆಯ ಪ್ರೌಢಶಾಲಾ ಮೈದಾನದಲ್ಲಿ ಮಯೂರ ಮಿತ್ರ ಮಂಡಳಿ(ರಿ) ವತಿಯಿಂದ ಭಾನುವಾರ ನಡೆದ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಸಾಮರ್ಥ್ಯವನ್ನು ಪ್ರತಿಯೊಬ್ಬ ಆಟಗಾರರು ತೋರಿಸಬೇಕು ಎಂದರು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಮುಖಂಡರಾದ ಎಸ್.ನರೇಂದ್ರಸಿಂಹ, ಎಂ.ಎಸ್.ಕೊಮಾರೆಪ್ಪ, ಡಿ.ವೆಂಕಟೇಶ, ನಾಗೇಂದ್ರ, ಮಂಜು ಇದ್ದರು. ಬಳ್ಳಾರಿ, ಯರಿಂಗಳ, ಬಾಗೇವಾಡಿ, ಸಿರಿಗೇರಿ, ದೇವಿನಗರ, ತೆಕ್ಕಲಕೋಟೆ, ಯರಗುಡಿ ಸೇರಿದಂತೆ ಒಟ್ಟು 13 ತಂಡಗಳು ಭಾಗವಹಿಸಿದ್ದವು.