ಶಿರಸಿ: ನಗರದ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ನಾರಾಯಣ ಭಾಗವತ ಅವರು ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ ಪಡೆದರು.
ನವದೆಹಲಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅದಕ್ಕೂ ಮೊದಲು ಅವರು ಪ್ರಧಾನ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಕುಮಟಾ ತಾಲೂಕಿನ ಹಂದಿಗೋಣ ಮೂಲದವರು. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯದ ವಿವಿಧ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಶಿರಸಿಯಲ್ಲಿದ್ದಾರೆ.
ತಮ್ಮ ಶಾಲೆಯ ಮಕ್ಕಳ ಕಲಿಕೆಗೆ ಕೌನ್ ಬನೇಗಾ ಕರೋಡಪತಿ ಮಾದರಿಯಲ್ಲಿ ರಸಪ್ರಶ್ನೆಗಳನ್ನು ಮಾಡಿಕೊಂಡಿದ್ದಾರೆ.`ನುಡಿಗನ್ನಡ ಬಳಗ' ಎಂಬ ಅವರದೇ ಬ್ಲಾಗ್ ಇದೆ.
ಯು ಟ್ಯೂಬ್ ಚಾನಲ್ ಇದೆ. ಹೈಸ್ಕೂಲ್‌ನ ಎಲ್ಲ ಪಾಠಗಳ ವಿಡಿಯೋ, ಆಡಿಯೋ ಗಳನ್ನು ಅದರಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. 10 ಲಕ್ಷ ಶಿಕ್ಷಕರು ಅದರ ಪ್ರಯೋಜನ ಪಡೆದಿದ್ದಾರೆ. ಕರೊನಾ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ನಾಟಕ ಎಂದು ಮಾಡಿಸಿದ್ದಾರೆ.
ಅಲ್ಲದೆ, ಕತೆ, ಕವನ, ನಾಟಕ ರಚನೆ ನಿರ್ದೇಶನ, ಅಭಿನಯ, ವಸ್ತ್ರಾಲಂಕಾರ, ಸಂಗೀತ, ಪೇಪರ್ ಕ್ರಾಫ್ಟ್, ಹಾರ್ಮೋನಿಯಂ ವಾದನ, ಯಕ್ಷಗಾನ, ಹೀಗೆ ಬಹುಮುಖ ಪ್ರತಿಭೆ ಅವರು. ರಜಾ ಶಿಬಿರಗಳನ್ನು ಆಯೋಜಿಸುತ್ತಾರೆ. ಅವರ ಸಂದರ್ಶನ ಇಲ್ಲಿದೆ.
*ಪ್ರಸ್ತುತ ಜಗತ್ತಿಗೆ ಶಿಕ್ಷಣ ಪದ್ಧತಿ ಹೇಗಿರಬೇಕು…? ಯಾವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು..?
ಉತ್ತರ: ಮಗುವಿನ ಆಸಕ್ತಿದಾಯಕ ಕ್ಷತ್ರಕ್ಕೆ ಆದ್ಯತೆ ನೀಡುವ ತಾಂತ್ರಿಕ ಆಧಾರಿತ ಶಿಕ್ಷಣ ಇಂದಿನ ತೀರ ಅಗತ್ಯವಾಗಿದೆ. ಈಗ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಬದುಕಿನ ಶಿಕ್ಷಣದ ಜತೆ ಹೊಸ ವಿಷಯದ ಕಲಿಯಲು ಅವಕಾಶ ನೀಡುತ್ತದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ತೆರೆದುಕೊಳ್ಳಲು, ಪ್ರತಿಭೆಗಳು ಹೊರ ಬರಲು ಬೇಕಾದ ಆತ್ಮವಿಶ್ವಾಸವನ್ನು ಕೆಲಸವನ್ನು ಇಂದಿನ ಶಿಕ್ಷಕರು ಮಾಡುವ ಅಗತ್ಯವಿದೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತಂತ್ರಜ್ಞಾನ(ಐಸಿಟಿ) ಆಧಾರಿತ ಶಿಕ್ಷಣ ಇಂದಿನ ತೀರ ಅಗತ್ಯವಿದೆ. ಧ್ವನಿ ಮತ್ತು ಚಿತ್ರಗಳು ಮುಂತಾದವನ್ನು ಬಳಸುವ ಇ ಲರ್ನಿಂಗ್‌ನಿಂದ ಮಕ್ಕಳಿಗೆ ಪಾಠಗಳು ಸುಲಭವಾಗಿ ಅರ್ಥವಾಗುತ್ತವೆ. ನನ್ನ ಬಳಿಕಲಿತ ಕನಿಷ್ಠ 5 ರಿಂದ 10 ವಿದ್ಯಾರ್ಥಿಗಳು ಪ್ರತಿ ವರ್ಷ ಕನ್ನಡದಲ್ಲಿ ಪೂರ್ಣಾಂಕ ಪಡೆಯುತ್ತಾರೆ. ಇದರಿಂದ ಎಲ್ಲ ಶಾಲೆಗಳಿಗೆ ಐಸಿಟಿ ಕಲಿಕೆ ಅಳವಡಿಸಬೇಕು. ಮುಖ್ಯವಾಗಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನಗಳಿಗೆ ಅಳವಡಿಸಬೇಕು.
*ನಿಮ್ಮ ಸಾಧನೆಗೆ ಪ್ರೇರಣೆ ಏನು…?
ಉತ್ತರ:ನಾನು ಈ ಹಂತಕ್ಕೆ ಬರಲು ಪ್ರೇರಣೆ ನನ್ನ ವಿದ್ಯಾರ್ಥಿಗಳು. ನೀನು ಮಾಡುವ ಕೆಲಸವನ್ನು, ವಿಷಯವನ್ನು ಪ್ರೀತಿಸು. ನಿನ್ನ ವಿದ್ಯಾರ್ಥಿಯನ್ನು ಕನಿಷ್ಠ ನಿನ್ನ ಮಕ್ಕಳಷ್ಟಾದರೂ ಪ್ರೀತಿಸು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರ ಹೇಳುತ್ತಾರೆ.
ಅದನ್ನು ನಾನು ಅಳವರಿಸಿಕೊಂಡಿದ್ದೇನೆ. ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಪಾಲಕರ ವರ್ಗದ ಸಹಕಾರ ನನ್ನ ಬೆಳವಣಿಗೆ ಸಹಕಾರಿಯಾಗಿದೆ.
*ಪ್ರಶಸ್ತಿ ಬಂದಿದ್ದು ಹೇಗನ್ನಿಸುತ್ತದೆ..?
ಉತ್ತರ: ನಿಜಕ್ಕೂ ನನ್ನ ಜೀವನದ ಮರೆಯಲಾಗದ ಕ್ಷಣ.ರಾಷ್ಟ್ರಪತಿಗಳಿಂದ ಪ್ರಶಸ್ತಿ ಸಿಗುತ್ತಿರುವುದು ಸಂತಸದ ಘಳಿಗೆ. ಪದ್ಮಶ್ರೀ ಪುರಸ್ಕೃತಿಗೆ ಸಿಗುವಷ್ಟು ಗೌರವ ನನಗೆ ದೆಹಲಿಯಲ್ಲಿ ಸಿಗುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಪ್ರಶಸ್ತಿ ಮಾರಿಕಾಂಬಾ ಪ್ರೌಢಶಾಲೆಯ ನನ್ನೆಲ್ಲ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಶಿಕ್ಷಕರಿಗೆ ಸಲ್ಲುತ್ತದೆ.