ಜಿಲ್ಲೆ

Sirsi-Kumta Road ಫೆ.25 ನಂತರವೂ ವಾಹನ ಸಂಚಾರವಿಲ್ಲ

ಕಾರವಾರ: ಶಿರಸಿ-ಕುಮಟಾ ರಸ್ತೆ (Sirsi-Kumta Road )ಯಲ್ಲಿ ಫೆಬ್ರವರಿಯ ನಂತರವೂ ವಾಹನ ಸಂಚಾರ ಪ್ರಾರಂಭವಾಗುವ ಸಾಧ್ಯತೆ ಕಡಿಮೆ ಇದೆ ಎಂಬ ಸೂಚನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಅವರು ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಸೆಂಬರ್‌ 2  ರಿಂದ ವಾಹನ ಸಂಚಾರವನ್ನು ಬಂದ್‌ ಮಾಡಿ, ಶಿರಸಿ ಕುಮಟಾ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಫೆ.25 ರವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Sirsi-Kumta Road

ಶಿರಸಿ ಕುಮಟಾ ರಸ್ತೆಯನ್ನು ಶೀಘ್ರ ಮುಗಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, 11  ಸೇತುವೆಗಳು ನಿರ್ಮಾಣವಾಗಬೇಕಿವೆ. ಕತಗಾಲ ಬಳಿ ಇದುವರೆಗೂ ಎನ್‌ಎಚ್‌ಎಐಗೆ ಹಸ್ತಾಂತರವಾಗಿಲ್ಲ. ಇದರಿಂದ ವಾಹನ ಸಂಚಾರ ನಿಷೇಧವನ್ನು ಇನ್ನಷ್ಟು ದಿನ ಮುಂದುವರಿಸಬೇಕಾದೀತು ಎಂದರು.