ಜಿಲ್ಲೆ

judgment ಮಹಿಳೆಯ ಮಾನಕ್ಕೆ ಹಾನಿ ಮಾಡಿದವರಿಗೆ 3 ವರ್ಷ ಜೈಲು ಶಿಕ್ಷೆ

Uttara Kannada - Subash Hegde

ಕಾರವಾರ: ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು(judgment) ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಬದಲಾಯಿಸಿದೆ. ಮಹಿಳೆಯೊಬ್ಬಳ ಮಾನಕ್ಕೆ ಕುಂದಾಗುವಂತೆ ವರ್ತಿಸಿ, ಆಕೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ನಾಲ್ವರನ್ನು ಬಿಡುಗಡೆ ಮಾಡಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯವು ಕಳೆದ ವರ್ಷ ಆದೇಶಿಸಿತ್ತು. ಸಿದ್ದಾಪುರದ ದೇವರಾಜ ನಾಗ ನಾಯ್ಕ, ನಾರಾಯಣ ಕರಿಯಾ ನಾಯ್ಕ, ಅಯ್ಯಪ್ಪ ಕುಟ್ಟನ್ ಪಾಲಶರಿ ಹಾಗೂ ಚಂದ್ರಶೇಖರ ನಾರಾಯಣ ನಾಯ್ಕ ಇವರೆಲ್ಲರಿಗೂ 3 ವರ್ಷ ಜೈಲು ಶಿಕ್ಷೆ ವಿಽಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಿರಣ ಕಿಣಿ ಅವರು ತೀರ್ಪು ಪ್ರಕಟಿಸಿದ್ದಾರೆ. ದೇವರಾಜ ನಾಯ್ಕನಿಗೆ 12,500 ರೂ. ದಂಡ ವಿಽಸಿದ್ದು, ಆತನು ನೊಂದ ಮಹಿಳೆಗೆ 5 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಇತರ ಅಪರಾಧಿಗಳಾದ ನಾರಾಯಣ ನಾಯ್ಕ, ಅಯ್ಯಪ್ಪ ಕುಟ್ಟನ್ ಹಾಗೂ ಚಂದ್ರಶೇಖರ ನಾಯ್ಕ ಇವರಿಗೆ ತಲಾ 10,500 ರೂ. ದಂಡ ವಿಽಸಲಾಗಿದೆ. ಅಲ್ಲದೆ, ಎಲ್ಲ ಅಪರಾಽಗಳು ಸೇರಿ ಮಹಿಳೆಯ ಗಂಡನಿಗೆ 4 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

judgment ಹಿನ್ನೆಲೆ:

2019 ರಲ್ಲಿ ಸಿದ್ದಾಪುರದ ಕಾನಸೂರಿನಲ್ಲಿ ಘಟನೆ ನಡೆದಿತ್ತು. ದೇವರಾಜ ನಾಗ ನಾಯ್ಕ ಎಲ್‌ಐಸಿ ಏಜೆಂಟ್ ಎಂದು ಹೇಳಿಕೊಂಡು ಪಾಲಿಸಿ ಮಾಡಿಸುವಂತೆ ಕೇಳಲು ಮನೆಗೆ ಬಂದವನು ಮಹಿಳೆಯ ಮಾನಕ್ಕೆ ಕುತ್ತಾಗುವಂತೆ ನಡೆದುಕೊಂಡಿದ್ದ ಎನ್ನಲಾಗಿದೆ. ಈ ಸಂಬAಧ ಮಹಿಳೆಯ ಪತಿ ವಿರೋಧ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದರು. ಎರಡು ದಿನದ ನಂತರ ಸಿದ್ದಾಪುರ-ಶಿರಸಿ ರಸ್ತೆಯಲ್ಲಿ ಮಹಿಳೆ ಹಾಗೂ ಆಕೆಯ ಪತಿ ಬೈಕ್‌ನಲ್ಲಿ ತೆರಳುವಾಗ ಕಾದು ಕುಳಿತ ದೇವರಾಜ ನಾಯ್ಕ ತನ್ನ ಇತರ ಸಹಚರರ ಜತೆ ಸೇರಿ ಹಲ್ಲೆ ಮಾಡಿದ್ದ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರನ್ನು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯವು ಬಿಡುಗಡೆ ಮಾಡಿ ಆದೇಶಿಸಿತ್ತು. ಆದರೆ, ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ್ ಸಮರ್ಥ ವಾದ ಮಂಡಿಸಿದ್ದರು.