ಜಿಲ್ಲೆ

ಶಿರಸಿ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿವರು

Uttara Kannada - Subash Hegde

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಿಸಲಾಗಿದೆ. ಸೆ.5ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿಯ ರಾಮನಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎನ್. ಬಿ. ನಾಯ್ಕ, ಸಿದ್ದಾಪುರ ತಾಲೂಕು ವಾಜಗದ್ದೆ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ವಿನಾಯಕ ಹೆಗಡೆ, ಯಲ್ಲಾಪುರ ತಾಲೂಕು ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶಿವಲೀಲಾ ಹುಣಸಗಿ, ಮುಂಡಗೋಡ ತಾಲೂಕು ಹಿರೇಹಳ್ಳಿ ಶಾಲೆಯ ಸಹಶಿಕ್ಷಕಿ ಪೂರ್ಣಿಮಾ ಕೈಟಕರ್, ಹಳಿಯಾಳ ತಾಲೂಕು ಕೇರವಾಡದ ಸಹಶಿಕ್ಷಕಿ ಸುನೀತಾ ಹುಲಸ್ವಾರ ಹಾಗೂ ಜೊಯಿಡಾ ತಾಲೂಕು ಮವಳಿಂಗ ಶಾಲೆಯ ಸಹಶಿಕ್ಷಕ ಶ್ರೀಕಾಂತ ನಾಯ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅದರಂತೆ ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿರಸಿ ತಾಲೂಕು ಭದ್ರಾಪುರ ಶಾಲೆ ಶಿಕ್ಷಕಿ ರಂಜನಾ ಹೆಗಡೆ, ಸಿದ್ದಾಪುರ ತಾಲೂಕು ಕೊಳಗಿ ಶಾಲೆಯ ಸಹಶಿಕ್ಷಕ ಧರ್ಮಣ್ಣ, ಯಲ್ಲಾಪುರ ತಾಲೂಕು ಅಲ್ಕೇರಿ ಗೌಳಿವಾಡ ಶಾಲೆಯ ಸಹ ಶಿಕ್ಷಕ ಗಂಗಪ್ಪ ಎಸ್. ಲಮಾಣಿ, ಮುಂಡಗೋಡ ತಾಲೂಕು ತಟ್ಟಿಹಳ್ಳಿ ಶಾಲೆಯ ಸಹ ಶಿಕ್ಷಕಿ ಸುನೀತಾ ಪವಾರ, ಹಳಿಯಾಳ ತಾಲೂಕು ಹೊಸ ಹಡಗಲಿ ಶಾಲೆಯ ಸಹ ಶಿಕ್ಷಕಿ ವನಶ್ರೀ ಸಿಂಧೆ ಹಾಗೂ ಜೊಯಿಡಾ ತಾಲೂಕು ಕ್ಯಾಸಲ್ ರಾಕ್ ಶಾಲೆಯ ಸಹ ಶಿಕ್ಷಕ ಮುತ್ತಪ್ಪ ವಠಾರ ಆಯ್ಕೆಯಾಗಿದ್ದಾರೆ.

ಅದರಂತೆ ಪ್ರೌಢ ಶಾಲಾ ವಿಭಾಗದಲ್ಲಿ ಶಿರಸಿ ತಾಲೂಕು ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗಣೇಶ ಭಟ್, ಸಿದ್ದಾಪುರ ತಾಲೂಕು ಬೇಡ್ಕಣಿ ಜನತಾ ವಿದ್ಯಾಲಯದ ಸಹ ಶಿಕ್ಷಕ ಪ್ರಕಾಶ ಮಂಜುನಾಥ ನಾಯ್ಕ, ಯಲ್ಲಾಪುರ ತಾಲೂಕು ವಿಶ್ವದರ್ಶನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಮುಕ್ತಾಬಾಯಿ ಎಸ್. ಹೆಗಡೆ, ಮುಂಡಗೋಡ ತಾಲೂಕು ಮಳಗಿ ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಕ ಅಶೋಕ ಸಂಕ್ರಿಕೊಪ್ಪ, ಹಳಿಯಾಳ ತಾಲೂಕು ದಾಂಡೇಲಿ ಜನತಾ ವಿದ್ಯಾಲಯದ ಸಹ ಶಿಕ್ಷಕ ಕಿಶೋರ ಕಿಂದಾಳಕರ್ ಹಾಗೂ ಜೊಯಿಡಾ ತಾಲೂಕು ಬಾಪೇಲಿ ಕ್ರಾಸ್ ಪ್ರೌಢ ಶಾಲೆ ಶಿಕ್ಷಕ ಶಿವಾನಂದ ಕೆ. ಎಸ್. ಆಯ್ಕೆಯಾಗಿದ್ದಾರೆ ಎಂದು ಡಿಡಿಪಿಐ ಕಚೇರಿ ಪ್ರಕಟಣೆ ತಿಳಿಸಿದೆ.