ಜಿಲ್ಲೆ

12ರಿಂದ ಕೆಂಜೂರಲ್ಲಿ ಸಿರಿಮುಡಿ ಹಬ್ಬ

ಕೊಕ್ಕರ್ಣೆ: ಕೆಂಜೂರು ಶ್ರೀ ಸಿರಿಮುಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 30ನೇ ವರ್ಷದ ಸಿರಿಮುಡಿ ಹಬ್ಬ ಜ.12ರಿಂದ 14ರ ವರೆಗೆ ಜರುಗಲಿದೆ.

12ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿಶ್ರೀ ಪುಣ್ಯಾಹವಾಚನಾ, ನಾಂದಿ ಧ್ವಜಾರೋಹಣ, ನವಕ ಪ್ರದಾನ, ಕಲಶಾರಾಧನೆ, ಪ್ರಧಾನಯಾಗ, ಮಹಾಪೂಜೆ, ಉತ್ಸವಬಲಿ, ಪಲ್ಲಪೂಜೆ, ಉತ್ತರಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಪರಿವಾರ ದೈವಗಳ ಪೂಜೆ, ಉತ್ಸವ ಬಲಿ, ರಾತ್ರಿ ಪೂಜೆ, ಮಹಾರಂಗಪೂಜೆ, ಶ್ರೀಭೂತಬಲಿ, ವಾಲಗಮಂಟಪ ಪೂಜೆ, ಅಷ್ಟಾವಧಾನ, ಶ್ರೀಕ್ಷೇತ್ರಪಾಲ ಪೂಜೆ, ಕವಾಟ ಬಂಧನ ನಡೆಯಲಿದೆ.

13ರಂದು ಬೆಳಗ್ಗೆ ಕವಾಟೋದ್ಘಾಟನಾ, ದಶವಿಧಸ್ನಾನ, ಪಂಚಾಂಗ ಶ್ರವಣ, ತುಲಾಭಾರಾದಿ ಸೇವೆ, ಸಂಜೆ ಅವಭೃತ, ಧ್ವಜಾರೋಹಣ, ರಾತ್ರಿ ಪೂಜೆ, ಮಂತ್ರಾಕ್ಷತೆ, ಅನಂತ ಪದ್ಮನಾಭ ಕೃಪಾ ಪೋಷಿತ ಯಕ್ಷ ಮಂಡಳಿ ಪೆರ್ಡೂರು ಅವರಿಂದ ಕಾಲಮಿತಿ ಯಕ್ಷಗಾನ ಬಯಲಾಟ. 14ರಂದು ಸಂಪ್ರೋಕ್ಷಣೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ಜರುಗಲಿದೆ ಎಂದು ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ ಕೆಂಜೂರು ನಾಯಕರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.