ಜಿಲ್ಲೆ

ಮಹಿಳೆಯರಿಗೆ ತರಬೇತಿ ನೀಡಿ ಬಳಿಕ ಸಾಲ ವಿತರಿಸುವಂತೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸೂಚನೆ

Ballari


ಸಿರಗುಪ್ಪ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರಿಗೆ ತರಬೇತಿ ನೀಡಿ ಬಳಿಕ ಸಾಲ ವಿತರಣೆ ಮಾಡಬೇಕೇ ಹೊರತು ಬರೀ ಸಾಲ ತೆಗೆದುಕೊಳ್ಳುವುದಕ್ಕೆ ಮಾತ್ರ ಉತ್ತೇಜಿಸುವಂತಾಗಬಾರದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ನಗರದ ಸಿಡಿಪಿಒ ಸಭಾಂಗಣದಲ್ಲಿ ಗ್ರಾಮೀಣ ಕೈಗಾರಿಕೆ ಜಿಲ್ಲಾ ಪಂಚಾಯತ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲಾಭಿವೃದ್ದಿ ಕೇಂದ್ರ(ಸಿಡಾಕ್) ಧಾರವಾಡ ಆಶ್ರಯದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗಾಗಿ ಶನಿವಾರ ನಡೆದ ಒಂದು ದಿನದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಸಾಲ ತೆಗೆದುಕೊಂಡ ಹಣವನ್ನು ಮಹಿಳೆಯರು ಹೊಲಿಗೆ, ಬಟ್ಟೆ ವ್ಯಾಪಾರ, ಹೈನುಗಾರಿಕೆಯಂತಹ ವಿವಿಧ ಸ್ವಯಂ ಉದ್ಯೋಗಳಲ್ಲಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು.

ಕರ್ನಾಟಕ ಉದ್ಯಮಶೀಲಾಭಿವೃದ್ದಿ ಕೇಂದ್ರದ ಜಂಟಿ ನಿರ್ದೇಶಕ ಜಿ.ಹುಡೇದ್ ಮಾತನಾಡಿ, ಮಹಿಳೆಯರು ಉತ್ತಮ ತರಬೇತಿ ಪಡೆದು ಸ್ಥಳೀಯವಾಗಿ ಬೇಡಿಕೆಯಿರುವ ಉತ್ಪನ್ನಗಳನ್ನು ತಯಾರಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು.

ಡಿಸ್ಟಿಕ್ ಲೀಡ್ ಬ್ಯಾಂಕ್ ಮ್ಯಾನೇಜರ್ ನವೀನ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಮಹಮದ್ ಸಾಧಿಕ್‌ವುಲ್ಲಾ, ಸಂಪನ್ಮೂಲ ವ್ಯಕ್ತಿ ಪ್ರಸನ್ನ, ತರಬೇತಿ ಅಧಿಕಾರಿ ವಿನೋದ್‌ಕುಮಾರ್, ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಎ.ಹನುಮನಗೌಡ, ತಾ.ಪಂ.ಇ.ಒ. ಶಿವಪ್ಪಸುಬೇದಾರ್, ಸಿಡಿಪಿಒ ಎ.ಕೆ.ಜಲಾಲಪ್ಪ ಹಾಗೂ ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.