ಸಿರಿಗೇರಿ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಚಂದನ್ ಗೋಪಾಲ್ ಮಾತನಾಡಿದರು. ಪಿಎಸ್‌ಐ ಶಶಿಧರ್ ನಾಯಕ್, ಪ್ರಮುಖರಾದ ಕೆ.ದ್ಯಾವಣ್ಣ, ಬಿ.ನಾಗೇಂದ್ರ, ಎರ‌್ರೆಪ್ಪ, ಯತ್ನಟ್ಟಿ ನಾಗರಾಜ್, ನಾಗರುದ್ರಗೌಡ ಇತರರಿದ್ದರು. 
ಜಿಲ್ಲೆ

ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಿ

ಸಿರಿಗೇರಿ: ಇತರರ ಭಾವನೆಗಳಿಗೆ ಧಕ್ಕೆ ಬಾರದಂತೆ, ಅಹಿತಕರ ಘಟನೆ ನಡೆಯದಂತೆ ಗ್ರಾಮದ ಮುಖಂಡರು ಎಚ್ಚರವಹಿಸಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಎಂದು ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್ ಸೂಚಿಸಿದರು.

ಗ್ರಾಮದ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಸರ್ಕಾರದ ಆದೇಶದಂತೆ ಡಿಜೆ ಬಳಸುವುದನ್ನು ನಿಷೇಧಿಸಲಾಗಿದೆ. ಅನಗತ್ಯ ಗಲಾಟೆ ಮಾಡಿಕೊಂಡು ಕಾನೂನು ಕುಣಿಕೆಯಲ್ಲಿ ಸಿಲುಕದಿರ. ಮನೆ ಮನೆಗೆ ಪೊಲೀಸ್ ಎಂಬ ಯೋಜನೆ ಜಾರಿಯಲ್ಲಿದೆ.

ಗ್ರಾಮದಲ್ಲಿ ಸಮಸ್ಯೆಗಳಿದ್ದರೆ ತಿಳಿಸಬೇಕು ಎಂದರು. ನಿಮಗಾಗಿ ನಾವು ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ್, ಕಸಾಪ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ನಾಗರಾಜ್ ಸ್ವಾಮಿ, ಮನೆಹಿಂದ್ಲು ಈರೇಶ್, ಅಕ್ಬರ್ ವಲಿ, ರಾಜಾಸಾಬ್, ಮಹಮದ್ ಸಾಬ್, ಬಿ.ಬಸನಗೌಡ, ನಾಗರಾಜ್ ಗೌಡ ಇದ್ದರು.