ಸಿರಿಗೇರಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಕೇಕ್ ಕತ್ತರಿಸಿ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಿದರು. ತಾ.ಪಂ. ತಾಂತ್ರಿಕ ಸಹಾಯಕರಾದ ಪ್ರದೀಪ್, ಅನುದೀಪ್, ಮೇಟಿಗಳಾದ ಹಳ್ಳಿಮರದ ಹನುಮಂತ, ಕೊಳ್ಳಿ ಶೇಖರ್, ಶ್ರೀರಾಮ್, ಮಾಸ್ತಿ ಪ್ರಕಾಶ , ಗಾದಿಲಿಂಗ, ಹಳ್ಳಿ ನಾಗಮ್ಮ, ಹುಲಿಗೆಮ್ಮ ಇದ್ದರು. 
ಜಿಲ್ಲೆ

ಸಿರಿಗೇರಿಯಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

ಶ್ರೀನಾಥ

ಸಿರಿಗೇರಿ: ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಗುರುವಾರ ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಿದರು.

ಕಾರ್ಮಿಕರಿಗೆ 100 ಮೀ. ಓಟದ ಸ್ಪರ್ಧೆ, ಬಲೂನ್‌ನಿಂದ ಗ್ಲಾಸ್ ತೆಗೆಯುವುದು, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.