ಸಿರಿಗೇರಿ ಸಮೀಪದ ಮುದ್ದಟ್ಟನೂರು ಗ್ರಾಪಂ ನೀರು ಸರಬರಾಜು ಮಾಡುವಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಶಾಸಕ ಬಿ.ಎಂ.ನಾಗರಾಜ್ ಪ್ರಮಾಣಪತ್ರ ವಿತರಿಸಿದರು. ಗ್ರಾಪಂ ಅಧ್ಯಕ್ಷ ಎಚ್.ಶೇಖರಪ್ಪ, ಉಪಾಧ್ಯಕ್ಷೆ ಶಾರದಮ್ಮ, ಪಿಡಿಒ ಕೆ.ಬಸವರಾಜ, ಪ್ರಮುಖರಾದ ಪ್ರಭು, ಅಂಜಿನಿ, ವೆಂಕಟೇಶ, ಜಡೇಶ, ಮಲ್ಲೆಪ್ಪ, ಶಂಕ್ರಪ್ಪ, ಪ್ರಕಾಶ್ ಗೌಡ, ಮಳಾಪುರ ತಿಮ್ಮಪ್ಪ ಇತರರಿದ್ದರು. 
ಜಿಲ್ಲೆ

ಕುಡಿವ ನೀರು ಸಮರ್ಪಕ ಬಳಕೆಯಾಗಲಿ - ಶಾಸಕ ಬಿ.ಎಂ.ನಾಗರಾಜ್

ಶ್ರೀನಾಥ

ಸಿರಿಗೇರಿ: ಪ್ರತಿಯೊಬ್ಬರೂ ಕುಡಿಯುವ ನೀರಿನ ಸಮರ್ಪಕ ಬಳಕೆಗೆ ಮುಂದಾಗಬೇಕು ಎಂದು ಶಾಸಕ ಬಿ.ಎಂ.ನಾಗರಾಜ್ ಹೇಳಿದರು.

ಸಮೀಪದ ಮುದ್ದಟ್ಟನೂರು ಗ್ರಾಪಂ ಆವರಣದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮತ್ತು ಜಲ ಜೀವನ್ ಮಿಷನ್ ಅಡಿ ನಿರಂತರ ನೀರು ಸರಬರಾಜು ಮಾಡುವಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಸರ್ಕಾರದಿಂದ ಜಾರಿಯಾಗುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನೀರು ಮಿತವಾಗಿ ಬಳಸಿಕೊಳ್ಳಿ. ಎಲ್ಲ ಗ್ರಾಮಗಳು ಈ ರೀತಿ ಪ್ರಮಾಣಪತ್ರ ಸ್ವೀಕರಿಸುವಂತಾಗಬೇಕು. ಕೇಂದ್ರ ಸರ್ಕಾರದಿಂದ ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದ್ದು, ರಾಜ್ಯದ ವಿವಿಧೆಡೆ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ರಾಜ್ಯಕ್ಕೆ ಹನ್ನೊಂದನೇ ಸ್ಥಾನ, ಜಿಲ್ಲೆ ತೃತೀಯ ಸ್ಥಾನ, ಸಿರುಗುಪ್ಪ ತಾಲೂಕು ಪ್ರಥಮ ಸ್ಥಾನ ಗಳಿಸಿದ್ದು ಶ್ಲಾಘನೀಯ ಎಂದರು.

ಗ್ರಾಮಸ್ಥರಿಗೆ ರಂಗೋಲಿ ಸ್ಪರ್ಧೆ, ಶಾಲಾ ಮಕ್ಕಳಿಗೆ ಪ್ರಬಂಧ ಹಾಗೂ ಚರ್ಚಾ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಎಚ್.ಶೇಖರಪ್ಪ, ಉಪಾಧ್ಯಕ್ಷೆ ಶಾರದಮ್ಮ, ಪಿಡಿಒ ಕೆ.ಬಸವರಾಜ, ಪ್ರಮುಖರಾದ ಪ್ರಭು, ಅಂಜಿನಿ, ವೆಂಕಟೇಶ, ಜಡೇಶ, ಮಲ್ಲೆಪ್ಪ, ಶಂಕ್ರಪ್ಪ, ಪ್ರಕಾಶ್ ಗೌಡ, ಮಳಾಪುರ ತಿಮ್ಮಪ್ಪ ಇತರರಿದ್ದರು.