ಜಿಲ್ಲೆ

ನರೇಗಾದಡಿ ಸಿರಿಗೇರಿಯ ಇತಿಹಾಸ ಪ್ರಸಿದ್ಧ ಬಾವಿ ಸ್ವಚ್ಛತೆ

Raghavendra Dandin

ಸಿರಿಗೇರಿ: ಪಟ್ಟಣದ ಇತಿಹಾಸ ಪ್ರಸಿದ್ಧ ಧರ್ಮಂತರ ಬಾವಿಯನ್ನು ಗುರುವಾರ ಸ್ವಚ್ಛಗೊಳಿಸಲಾಯಿತು.

ಮೊದಲಿನಿಂದಲೂ ಇಲ್ಲೇ ಗಣೇಶನ ಮಣ್ಣಿನ ವಿಗ್ರಹಗಳನ್ನು ವಿಸರ್ಜನೆ ಮಾಡುತ್ತ ಬರಲಾಗುತ್ತಿತ್ತು. ಇದರಿಂದ ಹೂಳು ಮತ್ತು ಪೂಜಾ ಸಾಮಗ್ರಿಗಳಿಂದ ತುಂಬಿತ್ತು. ನರೇಗಾದ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಬಾವಿ ಸ್ವಚ್ಚಗೊಳಿಸಲಾಯಿತು.

ಗ್ರಾಪಂ ಸದಸ್ಯರಾದ ಗೋಡೆ ಚಿನ್ನಪ್ಪ, ಕುಂಬಾರ್ ಬಸವರಾಜ್, ಬಿ.ಉಮೇಶ್, ಗೋಡೆ ಉಮೇಶ್, ಹೂಗಾರ್ ಬಸವರಾಜ್, ಜಯಧರ, ಹನುಮೇಶ್, ಸಿದ್ದೇಶ್, ಧೃವ, ಜಿ.ರಾಕೇಶ್, ಗೋಡೆ ತಿಮ್ಮಪ್ಪ, ಐ.ವಿರೂಪಾಕ್ಷಿ, ಪ್ಯಾಟೆಗೌಡ ಶಾಂತಿ ಇತರರು ಈ ಕಾರ್ಯಕ್ಕೆ ಸಹಕಾರ ನೀಡಿದರು.