ಸಿರಿಗೇರಿ ಗ್ರಾಪಂ ಸಮುದಾಯ ಭವನದಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ., ಉಪಾಧ್ಯಕ್ಷೆ ರಾಜಮ್ಮ , ಪಿಡಿಒ ಹುಸೇನ್‌ಪೀರ ಸಾಬ್, ಕಾರ್ಯದರ್ಶಿ ಸಿದ್ದರಾಮ ಇತರರಿದ್ದರು. 
ಜಿಲ್ಲೆ

ಕಾಮಗಾರಿ ಕಳಪೆಯಾದರೆ ಪ್ರತಿಭಟನೆ

ಸಿರಿಗೇರಿ: ಗ್ರಾಪಂ ವ್ಯಾಪ್ತಿಯ ದಾಸಪುರದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರು ಗ್ರಾಪಂ ಗಮನಕ್ಕೆ ತರದೇ ಆರಂಭಿಸಿದ್ದು, ಕಳಪೆ ಕಾಮಗಾರಿ ಮಾಡಿದ್ದಲ್ಲಿ ಗ್ರಾಪಂ ಸದಸ್ಯರೆಲ್ಲ ಹೋರಾಟ ಮಾಡುವುದಾಗಿ ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ. ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಎಚ್ಚರಿಕೆ ನೀಡಿದರು.

10 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಳಿಸಿ ನ.10ರೊಳಗೆ ಕೆರೆ ತುಂಬಿಸಬೇಕು. ಕೊಂಚಗೇರಿ, ದಾಸಪುರ, ಸಿದ್ದರಾಮಪುರ, ಸಿರಿಗೇರಿ ಸೇರಿ ವಿವಿಧೆಡೆ ನೀರಿನ ಸೌಲಭ್ಯ ಸಮರ್ಪಕವಾಗಿ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದರು.

ಪಿಡಿಒ ಹುಸೇನ್‌ಪೀರ ಸಾಬ್ ಮಾತನಾಡಿ, 15ನೇ ಹಣಕಾಸಿನ ಯೋಜನೆಯಡಿ 2023-24, 2024-25 ನೇ ಸಾಲಿನ ಹಣಕಾಸಿನ ಕೆಲವೊಂದು ಕಾಮಗಾರಿಗಳನ್ನು ಎಲ್ಲ ವಾರ್ಡ್‌ಗಳಲ್ಲಿ ಬದಲಾಯಿಸಲು ಅವಕಾಶವಿದ್ದು, ಎರಡು ದಿನಗಳಲ್ಲಿ ಕಾಮಗಾರಿ ಬದಲಾಯಿಸಬಹುದು.

ಆಶ್ರಯ ಕಾಲನಿಯಲ್ಲಿ ಎರಡು ಡೆಂೆ ಪ್ರಕರಣಗಳಿದ್ದು, ಆರೋಗ್ಯ ಇಲಾಖೆಯು ಇನ್‌ಡೋರ್‌ನಲ್ಲಿ ಫಾಗಿಂಗ್ ಮಾಡಲು ತಿಳಿಸಿದ್ದಾರೆ. ಮೂರನೇ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಲಕ್ಷ ರೂ. ಅನುದಾನ ಮೀಸಲಿರಿಸಿ ತ್ಯಾಜ್ಯ ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಹೊಸೂರು ಬಸ್ ನಿಲ್ದಾಣದ ಸುತ್ತ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಬಗ್ಗೆ ಆರ್‌ಟಿಐ ಮಾಹಿತಿ ಪಡೆದು, ಗ್ರಾಪಂಗೆ ದೂರು ನೀಡಿದ್ದು, ಇದನ್ನು ಪರಿಹರಿಸಲು ಕ್ರಮವಹಿಸಲಾಗುವುದು. ಛಲವಾದಿ ಸಮುದಾಯ ಭವನಕ್ಕೆ ಎರಡನೇ ವಾರ್ಡ್‌ನ ಕೆರೆಕೋಡಿಯ ನಗರೇಶ್ವರ ದೇವಸ್ಥಾನ ಹಿಂದುಗಡೆ ಸ್ಥಳ ನಿಗದಿಗೆ ಎಲ್ಲ್ಲ ಸದಸ್ಯರ ಅನುಮೋದನೆ ಇದೆ.

ನಾಲ್ಕು ಸಿಸಿ ಕ್ಯಾಮರಾ ಅಳವಡಿಸಿದ ಮತ್ತು ವಾಲ್ಮೀಕಿ ಜಯಂತಿಯ ಅನುದಾನ ಬಿಡುಗಡೆ ಮಾಡಿದೆ ಎಂದು ಬಾಕಿ ಬಿಲ್‌ಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿದರು.

ಉಪಾಧ್ಯಕ್ಷೆ ರಾಜಮ್ಮ , ಕಾರ್ಯದರ್ಶಿ ಸಿದ್ದರಾಮ, ಸಿಬ್ಬಂದಿ ಫಯಾಜ್, ರುದ್ರೇಶ್, ಎಚ್.ಹುಲುಗಪ್ಪ, ಗ್ರಾಪಂ ಸದಸ್ಯರಾದ ಎಸ್.ಎಂ ಅಡಿವಯ್ಯಸ್ವಾಮಿ, ವಿ.ಶೇಖರಪ್ಪ, ವಿ.ರಮೇಶ್, ಗುಡಟ್ಟಿ ಈರಣ್ಣ, ಎನ್.ಹನುಮಂತ, ಎನ್.ಕೆ.ಶಿವಮ್ಮ, ಸ್ನೇಹಲತಾ, ಅನುರಾಧ, ಲಕ್ಷ್ಮೀ, ನೀಲಮ್ಮ, ಸಲೀಂ, ಅನೀಲ್, ಗೋಡೆ ಚಿನ್ನಪ್ಪ, ವೀರೇಶ, ಕರಿಬಸಪ್ಪ, ಬಿ.ರಮೇಶ ಇತರರಿದ್ದರು.