ಸಿರಿಗೇರಿ ಸ.ಹಿ.ಮಾ.ಪ್ರಾ.ಶಾಲೆಯಲ್ಲಿ ಸ್ಪರ್ಧಾತ್ಮಕ ಸಿದ್ಧತೆ ಮಹತ್ವ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಸಿಆರ್‌ಪಿ ಅರುಣ್ ಕುಮಾರ್ ಉದ್ಘಾಟಿಸಿದರು. 
ಜಿಲ್ಲೆ

ಸ್ಪರ್ಧಾತ್ಮಕವಾಗಿ ಪರೀಕ್ಷೆಗೆ ಈಗಿಂದಲೇ ಸಿದ್ಧರಾಗಿ

ಶಶಿಧರ ಎಲ್

ಸಿರಿಗೇರಿ: ಮುಂಬರುವ ದಿನಗಳಲ್ಲಿ ತುಂಬಾ ಸ್ಪರ್ಧಾತ್ಮಕವಾದ ಪರಿಸರ ಸೃಷ್ಟಿಯಾಗುತ್ತದೆ. ಪಾಠದ ಜತೆಗೆ ಮಕ್ಕಳು ಪ್ರಾಥಮಿಕ ಹಂತದಿಂದ ಸಾಮಾನ್ಯ ಪ್ರವೇಶ ಪರಿಕ್ಷೆಗೆ ತಯಾರಾಗಬೇಕು. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಕೋಟಿಹಾಳ್ ಶಿಕ್ಷಕ, ಲೇಖಕ ಚೌಡಾಪುರದ ಸುರೇಶ್ ಅಭಿಪ್ರಾಯ ಪಟ್ಟರು.

ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆಕ್ಕಲಕೋಟೆ ಹೋಬಳಿ ಕಸಾಪದಿಂದ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವದ ಬಗ್ಗೆ ಮಾತನಾಡಿದರು. ಸಿರಿಗೇರಿ ಕ್ಲಸ್ಟರ್‌ನ ಸಿಆರ್‌ಪಿ ಅರುಣ್‌ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮಗಳು, ಪ್ರಬಂಧ ಸ್ಪರ್ಧೆ, ಕವಿಗೋಷ್ಠಿಗಳು, ವಚನಗಾಯನಗಳು, ವಿಶೇಷ ಉಪನ್ಯಾಸಗಳನ್ನು ನಿರಂತರ ಆಯೋಜಿಸಲಿ. ಶಾಲೆಯಲ್ಲಿ ಒಂದು ಗಂಟೆ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳ ತರಗತಿಯನ್ನು ತೆಗೆದುಕೊಳ್ಳಿ ಎಂದು ಶಿಕ್ಷಕರಿಗೆ ಹೇಳಿದರು.

ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ್, ಸುಮಂಗಳ ಮೇಟಿ ಮಾತನಾಡಿದರು. ದಲಿತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ಭಂಡಾರಿ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಶ್ವೇತಾಕುಮಾರಿ, ಗೋವಿಂದರಾಜು, ಸೌಮ್ಯಾ,ಕಾತ್ಯಾಯಿನಿ, ಕೆ.ಶಾಂತಮ್ಮ, ಎಸ್‌ಡಿಎಂಸಿ ಅಧ್ಯಕ್ಷರಾದ ಬಿಚ್ಚುಗತ್ತಿ ಹನುಮಂತ, ಭಜಂತ್ರಿ ರಮೇಶ್, ಗೌರವ ಕಾರ್ಯದರ್ಶಿ ರಾರಾವಿ ಜೆಡೆಪ್ಪ, ಪದಾಧಿಕಾರಿಗಳಾದ ರಾಧಾ, ಖಾಜಾಪೀರ್ ಇತರರು ಇದ್ದರು.