ಸಿರಿಗೇರಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆಯ ಜಾಗೃತಿ ಮೂಡಿಸಲಾಯಿತು. ತೋಟಗಾರಿಕೆ ಇಲಾಖೆ ಎಡಿ ಮಹೇಶ್ ಹಿರೇಮಠ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಲಿಂಗ ಕುಂಬಾರ, ರೈತರಾದ ಸಿದ್ದಯ್ಯ, ನೆನಕ್ಕಿ ಹನುಮಂತ, ಕೊಳ್ಳಿ ಈರಣ್ಣ, ಹೊಳಗುಂದಿ ವೀರೇಶ್, ವಿ.ನಾಗರಾಜ್, ಕುಂಬಾರ ಬಸವ, ಮಾರೇಶ್, ನೆನಕ್ಕಿ ದೊಡ್ಡಬಸವ ಇದ್ದರು. 
ಜಿಲ್ಲೆ

ತಾಳೆ ಬೆಳೆದು ಆರ್ಥಿಕವಾಗಿ ಸಬಲರಾಗಿ

ಶ್ರೀನಾಥ

ಸಿರಿಗೇರಿ: ಭಾರತ ವಿದೇಶದಿಂದ ಶೇ.80 ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ನಮ್ಮಲ್ಲಿಯೇ ತಾಳೆ ಬೆಳೆದರೆ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಮಹೇಶ್ ಹಿರೇಮಠ ತಿಳಿಸಿದರು.

ಗ್ರಾಮದ ಬಸವನಪೇಟೆ ಏರಿಯಾದಲ್ಲಿ ಗುರುವಾರ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಮಹತ್ವದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಶೇಂಗಾ, ತಾಳೆ, ಸೂರ್ಯಕಾಂತಿಯಂಥ ವಾಣಿಜ್ಯ ಬೆಳೆಗಳನ್ನು ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆಯತ್ತಿದ್ದಾರೆ.

ತಾಳೆ ಬೆಳೆದರೆ ರೈತರು ಆರ್ಥಿಕವಾಗಿ ಸಬಲರಾಗಬಹುದು.. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯಧನ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.